ಮುಂಬೈಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ರೈಲಿನ ಮೇಲೆ ಬಂಡೆ ಉರುಳಿ ಮೂವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Train--01

ಮುಂಬೈ, ಆ.21-ಚಲಿಸುತ್ತಿದ್ದ ರೈಲಿನ ಬೋಗಿಯ ಮೇಲೆ ಬಂಡೆ ಉರುಳಿ ಬಿದ್ದ ಪರಿಣಾಮ ಮೂವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮುಂಬೈ ಕೇಂದ್ರ ರೈಲ್ವೆ ವ್ಯಾಪ್ತಿಯ ಲೊನವ್ಲಾ ಸಮೀಪ ಇಂದು ಬೆಳಗ್ಗೆ ನಡೆದಿದೆ. ಮುಂಬೈಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಎಲ್‍ಟಿಟಿ ರೈಲಿನ ಮೇಲೆ ಬಂಡೆ ಉರುಳಿ ಬಿದ್ದಿದ್ದು, ಇಂದು ಮುಂಜಾನೆ ಸುಮಾರು 5 ಗಂಟೆ ಸಮಯದಲ್ಲಿ ವೇಗ ನಿಷೇಧಿತ ಪ್ರದೇಶವಾದ ಮಂಕಿ ಹಿಲ್ ಹಾಗೂ ತರುವಾಡಿ ನಿಲ್ದಾಣಗಳ ನಡುವೆ ಆಕಸ್ಮಿಕವಾಗಿ ಬಂಡೆ ಉರುಳಿ ಬಿದ್ದಿದೆ.

ಇದರ ಪರಿಣಾಮ ರೈಲಿನ 5-6 ಬೋಗಿಯಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡು ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಕೇಂದ್ರ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಸುನೀಲ್ ಉದಾಸಿ ತಿಳಿಸಿದ್ದಾರೆ.

2018 ರ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಆಯ್ಕೆಯ ಪಕ್ಷ ..?

View Results

Loading ... Loading ...
Facebook Comments

Sri Raghav

Admin