ರಾಜ್ಯಪಾಲರಿಗೆ ಬಸವರಾಜೇಂದ್ರ ನೀಡಿದ ದೂರಿನ ಹಿಂದೆ ರಾಜಕೀಯ ವಾಸನೆ

ಈ ಸುದ್ದಿಯನ್ನು ಶೇರ್ ಮಾಡಿ

Parameshwar--01

ಬೆಂಗಳೂರು, ಆ.21- ಎಸಿಬಿ ಅಧಿಕಾರಿಗಳು ಡಿ ನೋಟಿಫಿಕೇಷನ್ ಪ್ರಕರಣ ಸಂಬಂಧ ವಿಚಾರಣೆ ಸಂದರ್ಭದಲ್ಲಿ ಒತ್ತಡ ಹಾಕಿದ್ದಾರೆ ಎಂದು ರಾಜ್ಯಪಾಲರಿಗೆ ಕೆಎಎಸ್ ಅಧಿಕಾರಿ ಬಸವರಾಜೇಂದ್ರ ದೂರು ನೀಡಿರುವುದರ ಹಿಂದೆ ರಾಜಕೀಯ ವಾಸನೆ ಇದೆ. ಅವರ ಮೇಲೆ ಒತ್ತಡ ಹೇರಿರುವ ಸಂಶಯ ಮೂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದರು. ವಿಧಾನ ಪರಿಷತ್ ಉಪಚುನಾವಣೆಗೆ ಸಿ.ಎಂ.ಇಬ್ರಾಹಿಂ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸಿಬಿ ವಿರುದ್ಧ ಬಿಜೆಪಿ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಬಿಜೆಪಿಯವರ ವಿರುದ್ಧ ಈಗಾಗಲೇ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಹಲವರು ಜಾಮೀನಿನ ಮೇಲೆ ಇದ್ದಾರೆ. ಆ ಪ್ರಕರಣಗಳು ಮತ್ತೆ ದಾಖಲಾದರೆ ದ್ವೇಷ ಹೇಗಾಗುತ್ತದೆ.

ಸಿಎಂ ಎಸಿಬಿ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಬಿಜೆಪಿ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಅವರ ದೂರಿನ ಹಿಂದೆ ರಾಜಕೀಯ ಷಡ್ಯಂತ್ರವಿದ್ದಂತಿದೆ. ಅವರ ಮೇಲೆ ಯಾವುದೋ ಒತ್ತಡವಿದೆ. ಹಾಗಾಗಿ ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂದು ಪರಂ ಹೇಳಿದರು. ಎಸಿಬಿ ತನಿಖೆಯಿಂದ ಬಿಜೆಪಿಯವರಿಗೆ ಭಯ ಶುರುವಾಗಿದೆ. ಕಾನೂನು ತನ್ನ ಕೆಲಸವನ್ನು ಮಾಡುತ್ತಿದೆ. ಮುಖ್ಯಮಂತ್ರಿಯಾಗಲಿ, ಕಾಂಗ್ರೆಸ್ ಪಕ್ಷವಾಗಲಿ ಅಧಿಕಾರಿಗಳ ಮೇಲೆ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ಹೇಳಿದರು.

 

Facebook Comments

Sri Raghav

Admin