ಸಚಿವ ಸಂಪುಟ ವಿಸ್ತರಣೆ ಇನ್ನೂ ಕಗ್ಗಂಟು

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-01

ಬೆಂಗಳೂರು, ಆ.21- ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯಲ್ಲಿ ಅದೇಕೋ ತೊಡಕುಂಟಾದಂತೆ ಕಂಡುಬರುತ್ತಿದೆ. ಸಂಭಾವ್ಯ ಸಚಿವರೆನಿಸಿದ್ದ ಷಡಕ್ಷರಿ, ರೇವಣ್ಣ, ಆರ್.ಬಿ.ತಿಮ್ಮಾಪುರ್ ಅವರುಗಳು ಮುಖ್ಯಮಂತ್ರಿ ನಿವಾಸದ ಬಳಿ ಇಂದು ಯಾಕೋ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಖಾಲಿ ಉಳಿದಿರುವ ಮೂರು ಸ್ಥಾನಗಳಿಗೆ ಹೊಸಬರನ್ನು ನೇಮಕ ಮಾಡಿಕೊಳ್ಳಲು ಹೈಕಮಾಂಡ್ ಹಸಿರು ನಿಶಾನೆ ತೋರಿ ನಾಲ್ಕು ದಿನಗಳಾಗಿವೆ. ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಎಚ್.ಎಂ.ರೇವಣ್ಣ, ಷಡಕ್ಷರಿ, ಆರ್.ಬಿ.ತಿಮ್ಮಾಪುರ್ ಅವರು ಸಚಿವರಾಗುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿತ್ತು. ಆದರೆ, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಚರ್ಚೆಯಲ್ಲಿ ಕೊಂಚ ಎಡವಟ್ಟಾದಂತೆ ಕಂಡುಬಂದಿದೆ.

ಸಂಪುಟಕ್ಕೆ ಮತ್ಯಾರೋ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನೂ ಸಚಿವರಾಗುವ ಪಟ್ಟಿಯನ್ನುರಾಜಭವನಕ್ಕೆ ಕಳುಹಿಸಿದಂತಿಲ್ಲ. ಪ್ರಮಾಣ ವಚನ ಸ್ವೀಕಾರ ಸಮಯ ನಿಗದಿಯಾಗಿಲ್ಲ. ಇದೇ ತಿಂಗಳು 19 ಅಥವಾ 21, 22 ಎಂದು ಹೇಳಲಾಗಿತ್ತು. ಈ ಯಾವುದೇ ದಿನಗಳಲ್ಲೂ ಸಂಪುಟ ವಿಸ್ತರಣೆ ಆಗಲಿಲ್ಲ. ಇನ್ನು ವಿಸ್ತರಣೆ ದಿನಾಂಕ ನಿಗದಿ ಬಗ್ಗೆ ಸ್ಪಷ್ಟನೆ ಇಲ್ಲ. ಗುರುವಾರ ಅಂದರೆ 24ಕ್ಕೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸಿ.ಎಂ.ಇಬ್ರಾಹಿಂ, ಶಿವಳ್ಳಿ, ಬಿ.ಜಿ.ಗೋವಿಂದಪ್ಪ ಹಾಗೂ ಗೀತಾ ಮಹದೇವ ಪ್ರಸಾದ್ ಅವರು ಕೂಡ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಲಾಬಿ ಜೋರಾಗಿಯೇ ನಡೆಯುತ್ತಿದ್ದು, ಮುಂದೇನಾಗುತ್ತದೋ ಕಾದು ನೋಡಬೇಕು. ಯಾವುದರ ಬಗ್ಗೆಯೂ ಸ್ಪಷ್ಟನೆ ಇಲ್ಲ. ಮುಖ್ಯಮಂತ್ರಿಗಳು ಕೂಡ ಮಾಹಿತಿ ಬಿಟ್ಟುಕೊಡುತ್ತಿಲ್ಲ.

2018 ರ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಆಯ್ಕೆಯ ಪಕ್ಷ ..?

View Results

Loading ... Loading ...

Facebook Comments

Sri Raghav

Admin