ಸ್ಪೇನ್ ನಲ್ಲಿ 120 ಗ್ಯಾಸ್ ಕ್ಯಾನಿಸ್ಟರ್‍ಗಳು ಪತ್ತೆ, ಉಗ್ರರ ಭಾರೀ ವಿಧ್ವಂಸಕ ಕೃತ್ಯ ವಿಫಲ

ಈ ಸುದ್ದಿಯನ್ನು ಶೇರ್ ಮಾಡಿ

Spain--01

ಬಾರ್ಸಿಲೋನಾ/ಕ್ಯಾಟಾಲೋನಿಯಾ, ಆ.21-ಸ್ಪೇನ್ ಪೊಲೀಸರು ಅಲ್ಸಾನರ್ ಪಟ್ಟಣದ ಮನೆಯೊಂದರ ಮೇಲೆ ದಾಳಿ ನಡೆಸಿ 120ಕ್ಕೂ ಹೆಚ್ಚು ಗ್ಯಾಸ್ ಕ್ಯಾನಿಸ್ಟರ್‍ಗಳನ್ನು (ಗುಂಡುಗಳು ಮತ್ತು ಸ್ಫೋಟಕಗಳು ತುಂಬಿದ್ದ ಅನಿಲ ಡಬ್ಬಿಗಳು) ವಶಪಡಿಸಿಕೊಂಡಿದ್ದಾರೆ. ಇದರಿಂದಾಗಿ ಸ್ಪೇನ್‍ನಲ್ಲಿ ಉಗ್ರರಿಂದ ಮತ್ತೆ ನಡೆಯಬಹುದಾಗಿದ್ದ ಭಾರೀ ವಿಧ್ವಂಸಕ ಕೃತ್ಯಗಳು ತಪ್ಪಿದಂತಾಗಿದೆ.

ಬಾರ್ಸಿಲೋನಾ ಮತ್ತು ಕ್ಯಾಂಬ್ರಿಲ್ಸ್ ನಗರಗಳ ಮೇಲೆ ನಡೆದ ಎರಡು ಪ್ರತ್ಯೇಕ ಭಯೋತ್ಪಾದಕರು ದಾಳಿಗಳಲ್ಲಿ 14 ಮಂದಿ ಹತರಾಗಿ, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆಯ 12 ಉಗ್ರರು ಈ ಕ್ಥತ್ಯದಲ್ಲಿ ಶಾಮೀಲಾಗಿದ್ದರು. ಭದ್ರತಾಪಡೆ ಪ್ರಮುಖ ಸೂತ್ರಧಾರ ಸೇರಿದಂತೆ ಐವರನ್ನು ಗುಂಡಿಟ್ಟು ಕೊಂದಿದ್ದರು. ಉಳಿದ ಏಳು ಭಯೋತ್ಪಾದಕರಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿರುವಾಗಲೇ ಮನೆಯೊಂದರಲ್ಲಿ 120 ಗ್ಯಾಸ್ ಕ್ಯಾನಿಸ್ಟರ್‍ಗಳು ಪತ್ತೆಯಾಗಿವೆ.

ಬಾರ್ಸಿಲೋನಾ, ಕ್ಯಾಂಬ್ರಿಸ್, ಕ್ಯಾಟಾಲೋನಿಯಾ ಅಥವಾ ಅಲ್ಸಾನರ್ ನಗರಗಳಲ್ಲಿ ಈ ಭಾರೀ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದರು ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2018 ರ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಆಯ್ಕೆಯ ಪಕ್ಷ ..?

View Results

Loading ... Loading ...
Facebook Comments

Sri Raghav

Admin