ಇಟಲಿಯಲ್ಲಿ 4.0 ತೀವ್ರತೆಯ ಭೂಕಂಪ, ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Earthquake--03

ರೋಮ್, ಆ.22-ಇಟಲಿಯ ನೇಪಲ್ಸ್ ಕರಾವಳಿಯ ಇಸ್‍ಚಾ ದ್ವೀಪದಲ್ಲಿ ಸಂಭವಿಸಿದ ಭೂಕಂಪಕ್ಕೆ ಇಬ್ಬರು ಪ್ರವಾಸಿಗರು ಬಲಿಯಾಗಿ, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ಈ ಪ್ರವಾಸಿ ದ್ವೀಪದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿ, ಭೂಮಿ ಕಂಪಿಸುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಮತ್ತು ಪ್ರವಾಸಿಗಳು ಮನೆಗಳು ಮತ್ತು ಹೋಟೆಲ್‍ಗಳಿಂದ ಹೊರಗೆ ಓಡಿಬಂದರು.

Earthquake--01

ಈ ದ್ವೀಪದ ಕ್ಯಾಸಮಿಕ್ಕಿಯೊಲಾ ಪ್ರದೇಶದಲ್ಲಿ ಆರು ಕಟ್ಟಡಗಳು ಮತ್ತು ಒಂದು ಚರ್ಚ್ ಕುಸಿದು ಬಿದ್ದಿವೆ. ಕಟ್ಟಡಗಳ ಅವಶೇಷಗಳಡಿ ಮಕ್ಕಳೂ ಸೇರಿದಂತೆ ಕೆಲವರು ಸಿಲುಕಿದ್ದು ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.   ಭೂಕಂಪದಿಂದ ಅನೇಕರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ನೈಸರ್ಗಿಕ ವಿಕೋಪ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾ ಚರಣೆ ಭರದಿಂದ ಸಾಗಿದೆ.

Earthquake--02

Facebook Comments

Sri Raghav

Admin