ದಲಿತ ಬಾಲಕಿಯಿಂದ ಮಲ ಎತ್ತಿಸಿದ ಸವರ್ಣೀಯ..!

ಈ ಸುದ್ದಿಯನ್ನು ಶೇರ್ ಮಾಡಿ

School-Girl

ಛಾತ್ರಾಪುರ (ಮಧ್ಯಪ್ರದೇಶ), ಆ.22-ಇಲ್ಲಿಗೆ ಸಮೀಪದ ಲವಕುಶ ನಗರ ತಾಲ್ಲೂಕಿನ ಗೋಧರಾ ಗ್ರಾಮದ ಶಾಲೆಯ ಆವರಣದ ಹೊರಗೆ ಮಲ ವಿಸರ್ಜನೆ ಮಾಡಿದ ಆರು ವರ್ಷದ ಪುಟ್ಟ ದಲಿತ ಬಾಲಕಿಯ ಕೈನಿಂದಲೇ ಅದನ್ನು ಸವರ್ಣೀಯ ವ್ಯಕ್ತಿಯೊಬ್ಬ ಹೆಕ್ಕಿಸಿದ ಘಟನೆ ನಡೆದಿದೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಾಲಕಿ, ಶಿಕ್ಷಕರ ಅನುಮತಿ ಪಡೆದು ಶಾಲೆಯ ಮುಂಭಾಗದ ಬಯಲಿನ ತುದಿಗೆ ಮಲಮೂತ್ರ ವಿಸರ್ಜನೆ ಮಾಡಲು ಹೋಗಿದ್ದಳು. ಇದನ್ನು ಗಮನಿಸಿದ ಪಪ್ಪು ಸಿಂಗ್ ಎಂಬಾತ ಬಾಲಕಿಗೆ ಬೆದರಿಕೆ ಹಾಕಿ ಅದನ್ನು ಆ ಬಾಲಕಿಯ ಕೈನಿಂದಲೇ ತೆಗೆದು ದೂರ ಬಿಸಾಕುವಂತೆ ಒತ್ತಾಯಿಸಿದ. ಬಾಲಕಿಯು ಪೋಷಕರಿಗೆ ಘಟನೆ ಬಗ್ಗೆ ತಿಳಿಸಿದ್ದು, ದಲಿತ ಮುಖಂಡರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾಪತ್ತೆಯಾಗಿರುವ ಸಿಂಗ್‍ಗಾಗಿ ಪೊಲೀಸರು ಹುಡುಕುತ್ತಿದ್ದಾರೆ.

Facebook Comments

Sri Raghav

Admin