ಬೆಳ್ಳಂದೂರು ಕೆರೆಗೆ ‘ಕಾಂಗ್ರೆಸ್ ಕೆರೆ’ ಎಂದು ನಾಮಕರಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.22-ಬೆಳ್ಳಂದೂರು ಕೆರೆಯಲ್ಲಿನ ಮಾಲಿನ್ಯವನ್ನು ತಡೆಗಟ್ಟದೇ ಇರುವ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಪ್ರತಿಭಟನೆ ನಡೆಸಿದ ನವಭಾರತ ಪ್ರಜಾಸತಾತ್ಮಕ ಪಕ್ಷದ ಕಾರ್ಯಕರ್ತರು ಬೆಳ್ಳಂದೂರು ಕೆರೆಗೆ ಕಾಂಗ್ರೆಸ್ ಕೆರೆ ಎಂದು ಮರು ನಾಮಕರಣ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಬೆಳ್ಳಂದೂರು ಕೆರೆಗೆ ಮಲೀನಗೊಂಡ ನೀರು ಶೇಖರಣೆಯಾಗುವುದು ಮುಂದುವರೆದಿದೆ. ಇತ್ತೀಚೆಗೆ ಮಳೆ ಸುರಿದಾಗ ಕೆರೆಗೆ ನೀರು ಹರಿದು ಬರುವ ಜತೆಗೆ ಐದು ಅಡಿ ನೊರೆ ಸೃಷ್ಟಿಯಾಗಿತ್ತು. ಈ ನೊರೆ ಮೈ-ಕೈಗೆ ತಾಗಿದರೆ ಚರ್ಮದ ಕಾಯಿಲೆಗಳು ಬರುತ್ತಿವೆ. ಈ ಭಾಗದಲ್ಲಿ ಓಡಾಡಲು ಕಷ್ಟವಾಗುತ್ತಿದೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಕೆರೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಮಾಲಿನ್ಯವನ್ನು ತಡೆಗಟ್ಟಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅನಿಲ್‍ಶೆಟ್ಟಿ ದೂರಿದರು.

Bellandur

ಕಳೆದ ನಾಲ್ಕು ತಿಂಗಳಿನಿಂದ ಕೆರೆ ಅಭಿವೃದ್ಧಿ ಮಾಡುವುದಾಗಿ ಕೋಟ್ಯಂತರ ರೂ. ಖರ್ಚು ಮಾಡಲಾಗಿದೆ. ಆದರೆ, ಯಾವ ರೀತಿ ಅಭಿವೃದ್ಧಿಯಾಗಿದೆ ಎಂಬುದು ಮಾತ್ರ ಕಾಣುತ್ತಿಲ್ಲ. ಸುತ್ತಮುತ್ತಲಿನ ಭಾಗದ ಜನರಿಗೆ ಕೆರೆಯಿಂದ ಆಗುವ ತೊಂದರೆಗಳು ಮಾತ್ರ ನಿಂತಿಲ್ಲ. ಈ ಭಾಗದ ರಸ್ತೆಗಳು ಕೂಡ ದುಸ್ತಿಯಲ್ಲಿವೆ ಎಂದು ನವ ಭಾರತ ಪ್ರಜಾಸತಾತ್ಮಕ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕೆರೆಗೆ ಕಾಂಗ್ರೆಸ್ ಕೆರೆ ಎಂದು ನಾಮಕರಣ ಮಾಡಿ ಲೇವಡಿ ಮಾಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರ ವೇಷ ತೊಟ್ಟ ಕಾರ್ಯಕರ್ತರು ಅಣಕು ಪ್ರದರ್ಶನ ಮಾಡಿದರು.

Bellanduru--01

Bellandur-lake

Facebook Comments

Sri Raghav

Admin