ಬ್ಯಾಂಕ್ ನೌಕರರ ಮುಷ್ಕರದ ಬೆನ್ನಲ್ಲೇ ನಾಳೆ ಅಂಚೆ ನೌಕರರ ಮುಷ್ಕರ

ಈ ಸುದ್ದಿಯನ್ನು ಶೇರ್ ಮಾಡಿ

Postal-Strike-Post-Strike

ನವದೆಹಲಿ, ಆ.22-ದೇಶಾದ್ಯಂತ ಬ್ಯಾಂಕ್ ಮುಷ್ಕರ ನಡೆಯುತ್ತಿರುವ ಬೆನ್ನಲ್ಲೇ, ಅಂಚೆ ಸಿಬ್ಬಂದಿ ನಾಳೆ ರಾಷ್ಟ್ರವ್ಯಾಪಿ ಹರತಾಳಕ್ಕೆ ಕರೆ ನೀಡಿದೆ. ಉನ್ನತಮಟ್ಟದ ಸಮಿತಿ ಶಿಫಾರಸು ಮಾಡಿದ ಸೌಲಭ್ಯಗಳನ್ನು ಅನುಷ್ಠಾನಗೊಳಿಸಲು ವಿಫಲವಾಗಿರುವುದನ್ನು ಪ್ರತಿಭಟಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಗ್ರಾಮೀಣ್ ಡಾಕ್ ಸೇವಕ್ ಕಮಿಟಿ ವರದಿಯ ಯಥಾವತ್ ಅನುಷ್ಠಾನಕ್ಕೆ ಆಗ್ರಹಿಸಿ ಆ.23ರಂದು ದೇಶಾದ್ಯಂತ ಅಂಚೆ ಮುಷ್ಕರ ನಡೆಸಲಾಗುವುದು ಎಂದು ಅಂಚೆ ಉದ್ಯೋಗಿಗಳ ರಾಷ್ಟ್ರೀಯ ಒಕ್ಕೂಟ(ಎನ್‍ಎಫ್‍ಪಿಐ) ಪ್ರಧಾನ ಕಾರ್ಯದರ್ಶಿ ಆರ್.ಎಸ್.ಪಾರಾಸ್ಕರ್ ತಿಳಿಸಿದ್ದಾರೆ.

ಈ ಒಕ್ಕೂಟವು ನಾಲ್ಕು ಲಕ್ಷಕ್ಕೂ ಅಧಿಕ ಉದ್ಯೋಗಿಗಳ ಸದಸ್ಯತ್ವ ಹೊಂದಿದೆ. ದೇಶಾದ್ಯಂತ 1.8 ಲಕ್ಷ ಸದಸ್ಯರನ್ನು ಹೊಂದಿರುವ ಅಲ್ ಇಂಡಿಯಾ ಗ್ರಾಮೀಣ್ ಡಾಕ್ ಸೇವಕ್ ಯೂನಿಯನ್ ಈ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಒಂದು ವಾರದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದೆ. ಇದರ ಬೆನ್ನಲ್ಲೇ ಅಂಚೆ ಉದ್ಯೋಗಿಗಳ ಸಂಘ ಸಹ ಇದಕ್ಕೆ ಬೆಂಬಲವಾಗಿ ನಾಳೆ ಮುಷ್ಕರಕ್ಕೆ ಕರೆ ನೀಡಿದೆ.

Facebook Comments

Sri Raghav

Admin