ಭಾರತ ಮೂಲದ ಪ್ರಸಿದ್ಧ ಪತ್ರಕರ್ತ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

Davan-Maharaj

ನ್ಯೂಯಾರ್ಕ್, ಆ.22- ಸತತ 28 ವರ್ಷಗಳ ಕಾಲ ಲಾಸ್‍ಏಂಜಲ್ಸ್ ಟೈಮ್ಸ್ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಭಾರತ ಮೂಲದ ಪ್ರಸಿದ್ಧ ಪತ್ರಕರ್ತರೊಬ್ಬರನ್ನು ವಜಾಗೊಳಿಸಲಾಗಿದೆ. ದವನ್ ಮಹಾರಾಜ್ ಅವರು ಅಮೆರಿಕದ ಪ್ರಸಿದ್ಧ ದಿನ ಪತ್ರಿಕೆಯಾದ ಲಾಸ್ ಏಂಜಲ್ಸ್ ಟೈಮ್ಸ್‍ನಲ್ಲಿ 28 ವರ್ಷಗಳ ಕಾಲ ಕೆಲಸ ಮಾಡುತ್ತಿದ್ದರು. 2016ರಿಂದ ಪತ್ರಿಕೆಯ ಸಂಪಾದಕ ಹಾಗೂ ಪ್ರಕಾಶಕರಾಗಿ ಕೆಲಸ ಮಾಡುತ್ತಿದ್ದ ಇವರನ್ನು ಇದೀಗ ಏಕಾಏಕಿ ವಜಾ ಮಾಡಲಾಗಿದೆ. ಇವರ ಅವಧಿಯಲ್ಲಿ ಪಾರದರ್ಶಕ ಸುದ್ದಿ ಪ್ರಕಟಿಸಿ ತಮ್ಮ ಪತ್ರಿಕೆಯನ್ನು ನಂ.1 ಆಗಿ ಮಾಡಿದ್ದರು.

ಇವರನ್ನು ವಜಾ ಮಾಡಲಾಗಿದ್ದು, ಈ ಕ್ರಮಕ್ಕೆ ಕಾರಣ ತಿಳಿದು ಬಂದಿಲ್ಲ. ತಮ್ಮ ಸಂಪಾದಕ ಅವಧಿಯಲ್ಲಿ ಪತ್ರಿಕೆಯು ಪ್ರತಿಷ್ಠಿತ ಮೂರು ಪುಲ್ಟಿಜರ್ ಪ್ರಶಸ್ತಿ ಪಡೆದಿದ್ದರು.

Facebook Comments

Sri Raghav

Admin