ಸಿರಿಯಾದಲ್ಲಿ ರಷ್ಯಾ ನಡೆಸಿದ ವಾಯು ದಾಳಿಯಲ್ಲಿ 200 ಐಎಸ್ ಉಗ್ರರು ಫಿನಿಷ್

ಈ ಸುದ್ದಿಯನ್ನು ಶೇರ್ ಮಾಡಿ

Air-Strike--01

ಮಾಸ್ಕೋ, ಆ.22-ವಿಶ್ವಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಹೋರಾಟವನ್ನು ಅಮೆರಿಕ ತೀವ್ರಗೊಳಿಸಿರುವಾಗಲೇ ಮತ್ತೊಂದು ಶಕ್ತಿಶಾಲಿ ರಾಷ್ಟ್ರ ರಷ್ಯಾ ಸಹ ಐಎಸ್ ಭಯೋತ್ಪಾದಕರ ಹುಟ್ಟಡಗಿಸಲು ಬಿರುಸಿನ ಕಾರ್ಯಾಚರಣೆ ಕೈಗೊಂಡಿದೆ. ಸಿರಿಯಾದ ಡೇರ್ ಅಲ್-ರೊರ್ ನಗರಕ್ಕೆ ಪ್ರಯಾಣಿಸುತ್ತಿದ್ದ ಐಎಸ್ ಉಗ್ರರ ಗುಂಪಿನ ಮೇಲೆ ರಷ್ಯಾ ವಾಯುಪಡೆ ವಿಮಾನಗಳು ದಾಳಿ ನಡೆಸಿವೆ.

Air-Strike--03

ಈ ವೈಮಾನಿಕ ಆಕ್ರಮಣದಲ್ಲಿ 200ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ ಅಮೆರಿಕ ನೇತೃತ್ವದ ಮಿತ್ರಪಡೆಗಳು ಸಿರಿಯಾ ರಖಾ ಪ್ರಾಂತ್ಯದಿಂದ ಉಗ್ರರನ್ನು ಹೊರದಬ್ಬುತ್ತಿದ್ದು, ಇವರು ಡೇರ್ ಅಲ್-ರೂರ್ ಪಟ್ಟಣದಲ್ಲಿ ಜಮಾವಣೆಯಾಗುತ್ತಿದ್ದಾರೆ.

Air-Strike--02

Facebook Comments

Sri Raghav

Admin