ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಗಂಡನು ಬದುಕಿದ್ದೂ ತೌರುಮನೆಯಲ್ಲೇ ಇರುವ ಹೆಣ್ಣು ಪತಿವ್ರತೆಯಾಗಿದ್ದರೂ ಜನರು ಅವಳ ವಿಷಯದಲ್ಲಿ ಸಂಶಯ ತಾಳುತ್ತಾರೆ. ಆದುದರಿಂದ ಗಂಡನಿಗೆ ಪ್ರಿಯಳಾಗಿರಲಿ, ಇಲ್ಲವಾಗಲಿ ನೆಂಟರು ಅವಳನ್ನು ಹೇಗಾದರೂ ಗಂಡನ ಮನೆಯಲ್ಲಿರಲೆಂದು ಅಪೇಕ್ಷಿಸುತ್ತಾರೆ. – ಅಭಿಜ್ಞಾನ ಶಾಕುಂತಲ

Rashi

ಪಂಚಾಂಗ :  ಬುಧವಾರ, 23.08.2017

ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.36
ಚಂದ್ರ ಉದಯ ಮ.ಬೆ.07.33 / ಚಂದ್ರ ಅಸ್ತ ರಾ.07.58
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ
ಶುಕ್ಲ ಪಕ್ಷ / ತಿಥಿ : ದ್ವಿತೀಯಾ (ರಾ.09.03) / ನಕ್ಷತ್ರ: ಪೂರ್ವಫಲ್ಗುಣಿ (ಮ.02.04)
ಯೋಗ: ಸಿದ್ಧ (ರಾ.01.46) / ಕರಣ: ಬಾಲವ-ಕೌಲವ (ಬೆ.09.35-ರಾ.09.03)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 07

ರಾಶಿ ಭವಿಷ್ಯ :

ಮೇಷ : ಮಹತ್ವದ ವಿಚಾರಗಳಲ್ಲಿ ದುಡುಕದೆ ವಿವೇಚನಾ ಕ್ರಮದಿಂದ ಹೆಜ್ಜೆ ಇಡಬೇಕು
ವೃಷಭ : ಬಹುದಿನಗಳಿಂದ ಕಾದು ವಿವಾಹಕ್ಕೆ ಸಿದ್ಧತೆ ಯಲ್ಲಿರುವವರಿಗೆ ಕಂಕಣಬಲ ಕೂಡಿ ಬರಲಿದೆ
ಮಿಥುನ: ಖರ್ಚು ಹೆಚ್ಚಾಗಿ ಆತಂಕಕ್ಕೆ ಒಳಗಾಗುವಿರಿ
ಕಟಕ : ಸರ್ಕಾರಿ ಕಚೇರಿ ಕಾರ್ಯಗಳಿಂದ ಹಿನ್ನಡೆ ಉಂಟಾಗಿ ಬೇಸರವಾಗಲಿದೆ
ಸಿಂಹ: ತಕ್ಕಮಟ್ಟಿಗೆ ಮಾತಿಗೆ ಮಾತು ಬೆಳೆಸದೆ ಮೌನದಿಂದ ಕಾರ್ಯ ಸಾಧಿಸಬೇಕು
ಕನ್ಯಾ: ಧಾರ್ಮಿಕ ಆಚಾರ ವಂತರಿಗೆ ಸಣ್ಣಪುಟ್ಟ ಸಮಸ್ಯೆ ಗಳು ಎದುರಾಗಲಿವೆ

ತುಲಾ: ಹಿರಿಯರ ಮಾರ್ಗ ದರ್ಶನದತ್ತ ಒಲವು ಇರಲಿ
ವೃಶ್ಚಿಕ : ವ್ಯಾಪಾರ- ವ್ಯವಹಾರ ಗಳಲ್ಲಿ ತುಸು ಚೇತರಿಕೆ ಕಂಡುಬರಲಿದೆ
ಧನುಸ್ಸು: ನಿತ್ಯದ ಕೆಲಸದಲ್ಲಿ ತುಸು ಶ್ರಮ ಎನಿಸಲಿದೆ
ಮಕರ: ಹಿರಿಯರ ಸಹಕಾರದಿಂದ ಮುನ್ನಡೆ ತೋರಿ ಬಂದರೂ ವೈಯಕ್ತಿಕ ಸ್ಥಾನಮಾನ ಕಾಪಾಡಿಕೊಳ್ಳಲು ಯತ್ನಿಸಿ
ಕುಂಭ: ಕೂಡಿಟ್ಟ ಹಣ ಸದುಪಯೋಗವಾಗಿ ಪ್ರಶಂಸೆಗೆ ಒಳಗಾಗುವಿರಿ, ಉತ್ತಮ ದಿನ
ಮೀನ: ಸ್ನೇಹಿತರ ನೆರವಿನಿಂದ ಕಾರ್ಯಾನುಕೂಲ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin