ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸು-ಎಮ್ಮೆಗಳ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Kunigal

ಕುಣಿಗಲ್,ಆ.23- ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸು-ಎಮ್ಮೆಗಳನ್ನು ಪಟ್ಟಣ ಪೊಲೀಸರು ರಕ್ಷಿಸಿ, ಟೆಂಪೋ , ಕಂಟೈನರ್ ಹಾಗೂ ಕ್ಯಾಂಟರ್ ಅನ್ನು ವಶಪಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75ರ ಹೇರೂರು ಬಳಿ ಹಾಸನ ಕಡೆಯಿಂದ ಬೆಂಗಳೂರಿನ ಕಡೆಗೆ ಮೂರು ವಾಹನಗಳು 47 ಎಮ್ಮೆ, 3 ಹಸುಗಳನ್ನು ತುಂಬಿಕೊಂಡು ಬೆಂಗಳೂರಿನ ಕಸಾಯಿಖಾನೆಗೆ ಸಾಗಿಸುತ್ತಿದ್ದ ವೇಳೆ ಕುಣಿಗಲ್ ಯುವ ಬ್ರಿಗೇಡ್ ಮುಖ್ಯಸ್ಥ ಪುನೀತ್ ಎಂಬುವರು ತಡೆದು ತಪಾಸಣೆ ನಡೆಸಿದಾಗ ಎಮ್ಮೆ ಮತ್ತು ಹಸುಗಳನ್ನು ತುಂಬಿರುವುದು ಕಂಡು ಬಂದಿತತು. ತಕ್ಷಣವೇ ಪಟ್ಟಣದ ಪೊಲೀಸ ಠಾಣೆಗೆ ವಿಷಯ ತಿಳಿಸಿದ್ದು, ಪೊಲೀಸರು ವಾಹನವನ್ನು ವಶಕ್ಕೆ ಪಡೆದುಕೊಂಡು ಚಾಲಕರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ತಿಪಟೂರು ತಾಲೂಕು ಕರಾಡು ಸಂತೆಯಿಂದ ಖರೀದಿ ಮಾಡು, ಬೆಂಗಳೂರು ಬಳಿಯ ಕಸಾಯಿಖಾನೆಗೆ ಸಾಗಿಸುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಪೊಲೀಸರು ಜಾನುವಾರುಗಳನ್ನು ಮೈಸೂರಿನ ಗೋಶಾಲೆಗೆ ಬಿಟ್ಟಿದ್ದಾರೆ.

Facebook Comments

Sri Raghav

Admin