ಕ್ವಾಲಿಸ್-ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ, ಇಬ್ಬರು ಸಾವು, ಮೂವರ ಸ್ಥಿತಿ ಚಿಂತಾಜನಕ

ಈ ಸುದ್ದಿಯನ್ನು ಶೇರ್ ಮಾಡಿ

Accident-Malavalli

ಮಳವಳ್ಳಿ,ಆ.23- ಕ್ವಾಲಿಸ್ ಹಾಗೂ ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕ್ವಾಲಿಸ್‍ನಲ್ಲಿದ್ದ ಇಬ್ಬರು ದಾರುಣ ಸಾವನ್ನಪ್ಪಿ, ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ಮದ್ದೂರು-ಮಳವಳ್ಳಿ ರಾಷ್ಟ್ರೀಯ ಹೆದ್ದಾರಿಯ ಬಸವನಪುರ ಗೇಟ್ ಬಳಿ ಇಂದು ಬೆಳಗ್ಗೆ ನಡೆದಿದೆ. ಕೋಲಾರ ಜ್ಲಿಲೆಯ ಕಿಚ್ಚಹಳ್ಳಿ ವಿಜಯಕುಮಾರ ಮೃತರಲ್ಲಿ ಒಬ್ಬರಾಗಿದ್ದು, ಇನ್ನೊಬ್ಬ ಮೃತರ ಹೆಸರು ತಿಳಿದು ಬಂದಿಲ್ಲ.  ಬಂಗಾರಪೇಟೆಯ ಹರ್ಷ ಜ್ಯೋತಿ ಶಾಲೆಯ ಮುಖ್ಯಸ್ಥ ಪ್ರಭುಲಿಂಗ ದೇವರು, ಆನಂದ್, ನಾಗರಾಜ್ ಸ್ಥಿತಿ ಚಿಂತಜನಕವಾಗಿದ್ದು, ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಕೆಲಸದ ನಿಮಿತ್ತ ನಿನ್ನೆ ಬಂಗಾರಪೇಟೆಯಿಂದ ಕೊಳ್ಳೆಗಾಲಕ್ಕೆ ಹೋಗಿ, ಇಂದು ಬೆಳಗ್ಗೆ ಬೆಂಗಳೂರು ಕಡೆಗೆ ತೆರಳುತ್ತಿದ್ದಾಗ ಮದ್ದೂರಿನಿಂದ ಮಳವಳ್ಳಿಗೆ ಬರುತ್ತಿದ್ದ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಈ ಅಪಘಾತ ನಡೆದಿದೆ. ಡಿಕ್ಕಿ ರಭಸಕ್ಕೆ ಕ್ವಾಲಿಸ್ ನಜ್ಜುಗುಜ್ಜಾಗಿದ್ದು, ಕೆಲವು ಕಾಲ ಟ್ರಾಫಿಕ್ ಜಾಮ್ ಆಗಿತ್ತು. ವಿಷಯ ತಿಳಿದು ಮಳವಳ್ಳಿ ಗ್ರಾಮಾಂತರ ಠಾಣೆ ಸರ್ಕಲ್ ಇನ್ಸಪೆಕ್ಟರ್ ಶ್ರೀಕಾಂತ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಎರಡು ವಾಹನಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin