ಧಾರ್ಮಿಕ ನಂಬಿಕೆ ವಿಷಯಗಳಲ್ಲಿ ತಾಳ್ಮೆ ಇರಲಿ : ನ್ಯಾಯಾಧೀಶರಿಗೆ ಸಿಐಜೆ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

CJI-JS-Khehar

ನವದೆಹಲಿ, ಆ.23-ವೈಯಕ್ತಿಕ ಕಾನೂನು ವಿಚಾರಗಳಲ್ಲಿ ವಿಚಾರವಾದಿಗಳು ಮತ್ತು ಬುದ್ದಿಜೀವಿಗಳು ಮಾಡಬಹುದಾದ ಹಸ್ತಕ್ಷೇಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್, ಧಾರ್ಮಿಕ ನಂಬಿಕೆ ವಿಷಯಗಳಲ್ಲಿ ತಾಳ್ಮೆ ವಹಿಸುವಂತೆ ನ್ಯಾಯಾಧೀಶರುಗಳಿಗೆ ಸಲಹೆ ಮಾಡಿದ್ದಾರೆ.

ತ್ರಿವಳಿ ತಲಾಖ್ ಕುರಿತು ನಿನ್ನೆ ಐತಿಹಾಸಿಕ ತೀರ್ಪು ನೀಡುವ ಸಂದರ್ಭದಲ್ಲಿ ಕೆಲವು ಮಹತ್ವದ ವಿಷಯಗಳನ್ನು ಸಿಐಜೆ ಪ್ರಸ್ತಾಪಿಸಿದರು. ಕೆಲವು ಸೂಕ್ಷ್ಮ ವಿಚಾರಗಳಲ್ಲಿ ನಾವು ತೀರ್ಪು ನೀಡುವಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ನಮ್ಮ ಆತ್ಮ ಸಾಕ್ಷಿಯು ವಿವಿಧ ಧರ್ಮದ ಪದ್ದತಿಗಳ ಹಾಗೂ ವೈಯಕ್ತಿಕ ಕಾನೂನುಗಳ ಮೂಲೆ ಮೂಲೆಗಳಿಗೆ ಸಂಚರಿಸುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

Facebook Comments

Sri Raghav

Admin