ನೋಟಿಸ್ ವಾಪಸ್ ಪಡೆದ ಎಸಿಬಿ, ಸದ್ಯ ಯಡಿಯೂರಪ್ಪ ನಿರಾಳ

ಈ ಸುದ್ದಿಯನ್ನು ಶೇರ್ ಮಾಡಿ

BS-Yadiyurappa

ಬೆಂಗಳೂರು, ಆ.23- ಶಿವರಾಮ ಕಾರಂತ ಬಡಾವಣೆ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯ ಉಚ್ಚ ನ್ಯಾಯಾಲಯದಿಂದ ತಾತ್ಕಾಲಿಕ ರಿಲೀಫ್ ದೊರೆತಿದೆ. ಯಡಿಯೂರಪ್ಪ ಅವರನ್ನು ಆಗಸ್ಟ್ 28ರ ವರೆಗೆ ಬಂಧಿಸದಂತೆ ಉಚ್ಚ ನ್ಯಾಯಾಲಯ ಎಸಿಬಿಗೆ ಸೂಚಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಯಡಿಯೂರಪ್ಪ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನೀಡಿದ್ದ ನೋಟಿಸ್‍ಅನ್ನು ವಾಪಸ್ ಪಡೆಯಲಾಗಿದೆ.  ಡಿ ನೋಟಿಫಿಕೇಷನ್ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಆ.28ಕ್ಕೆ ಮುಂದೂಡಿದೆ. ವಿಚಾರಣೆವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಎಸಿಬಿಗೆ ಸೂಚಿಸಿದ್ದು, ಯಡಿಯೂರಪ್ಪ ಅವರಿಗೆ ಸದ್ಯ ನಿರಾಳವಾದಂತಾಗಿದೆ.

Facebook Comments

Sri Raghav

Admin