ಬಿಹಾರದ ಭೀಕರ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 361ಕ್ಕೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Bihar

ಪಾಟ್ನಾ, ಆ.23-ಭಾರೀ ಮಳೆ ಮತ್ತು ಪ್ರವಾಹದಿಂದ ಅಕ್ಷರಶ: ಜಲಪ್ರಳಯಕ್ಕೆ ತುತ್ತಾಗಿರುವ ಬಿಹಾರದಲ್ಲಿ ಸಾವು-ನೋವಿನ ಸಂಖ್ಯೆಯು ನೀರಿನ ಮಟ್ಟದಂತೆ ಏರುತ್ತಲೇ ಇದೆ. ನೆರೆ ಹಾವಳಿಯಿಂದ ಮೃತರ ಸಂಖ್ಯೆ 361ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಬಿಹಾರದ 19 ಜಿಲ್ಲೆಗಳು ಪ್ರವಾಹದಲ್ಲಿ ಮುಳುಗಿದ್ದು, 1.46 ಕೋಟಿ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬಿಹಾರ ವಿಪತ್ತು ನಿರ್ವಹಣೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈವರೆಗೆ 7,61,774 ಜನರನ್ನು ಅಪಾಯದಿಂದ ಪಾರು ಮಾಡಿ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. 1,085 ಪರಿಹಾರ ಶಿಬಿರಗಳಲ್ಲಿ 2,29,097 ಜನರು ಆಶ್ರಯ ಪಡೆದಿದ್ದಾರೆ. ನೆರೆ ಸಂತ್ರಸ್ತರಿಗೆ ಆಹಾರ ಪೂರೈಸಲು 1,608 ಸಮುದಾಯ ಅಡುಗೆ ಮನೆಗಳನ್ನು ಸ್ಥಾಪಿಸಲಾಗಿದೆ.

Bihar--3

ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಮತ್ತು ಭೀಕರ ಪ್ರವಾಹದಲ್ಲಿ ನೂರಾರು ಮನೆಗಳು-ಗುಡಿಸಲುಗಳು ಕೊಚ್ಚಿ ಹೋಗಿವೆ. ಅನೇಕ ಕಟ್ಟಡಗಳು, ರಸ್ತೆಗಳು, ಸೇತುವೆಗಳು ನಾಶವಾಗಿವೆ. ಈ ಜಿಲ್ಲೆಗಳ ಬಹುತೇಕ ಎಲ್ಲ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಕೋಟ್ಯಂತರ ರೂಪಾಯಿ ಮËಲ್ಯದ ಬೆಳೆಗಳು ಹಾನಿಯಾಗಿವೆ.

Bihar--02

Bihar--01

Facebook Comments

Sri Raghav

Admin