ಮತ್ತಷ್ಟು ಅಣ್ವಸ್ತ್ರ ಕ್ಷಿಪಣಿಗಳ ಉತ್ಪಾದನೆಗೆ ಕಿರಾತಕ ಕಿಮ್ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

Kim--01

ಸಿಯೋಲ್, ಆ.23-ಅಣ್ವಸ್ತ್ರ ಕ್ಷಿಪಣಿಗಳ ಪರೀಕ್ಷೆ ಮತ್ತು ಉಡಾವಣೆಗಳ ತೀರಾ ಸಾಮಾನ್ಯವಾಗಿರುವ ಉತ್ತರ ಕೊರಿಯಾ ವಿಶ್ವಸಂಸ್ಥೆ ಅಥವಾ ಅಮೆರಿಕದ ಬೆದರಿಕೆಗೆ ಮಣಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಬದಲಿಗೆ ಆ ದೇಶದ ಸರ್ವಾಧಿಕಾರಿ ಕಿಮ್ ಜಾಂಗ್ -ಉನ್ ಮತ್ತಷ್ಟು ರಾಕೆಟ್ ಎಂಜಿನ್‍ಗಳು ಮತ್ತು ಖಂಡಾಂತರ ಕ್ಷಿಪಣಿಗಳನ್ನು(ಐಸಿಬಿಎಂ) ಉತ್ಪಾದಿಸುವಂತೆ ಆದೇಶಿಸಿ ವಿಶ್ವದ ಮಹಾ ಶಕ್ತಿಶಾಲಿ ರಾಷ್ಟ್ರಗಳಿಗೇ ತಿರುಗೇಟು ನೀಡಿದ್ದಾರೆ.

ಕಳೆದ ತಿಂಗಳು ಎರಡು ಐಸಿಬಿಎಂ ಪರೀಕ್ಷೆಗಳನ್ನು ನಡೆಸಿ ಏಷ್ಯಾ ಖಂಡವಲ್ಲದೇ ವಿಶ್ವಕ್ಕೂ ಆತಂಕ ಸೃಷ್ಟಿಸಿದ್ದ ಉತ್ತರ ಕೊರಿಯಾ ಮತ್ತೆ ಅಣ್ವಸ್ಥ್ರ ಕ್ಷಿಪಣಿಗಳ ಬಗ್ಗೆ ತನಗಿರುವ ಹಪಾಹಪಿತನವನ್ನು ತೋರ್ಪಡಿಸಿದೆ.  ದಕ್ಷಿಣ ಕೊರಿಯಾ, ಜಪಾನ್ ಮತ್ತು ಅಮೆರಿಕದ ಸೇನಾ ಪ್ರಾಬಲ್ಯವಿರುವ ಗುವಾಂ ಮೇಲೆ ದಾಳಿ ನಡೆಸುವುದಾಗಿ ಈ ಹಿಂದೆ ಉತ್ತರ ಕೊರಿಯಾ ಬೆದರಿಕೆ ಹಾಕಿತ್ತು.

ಇದಕ್ಕೆ ಪ್ರತಿಯಾಗಿ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಉಲ್‍ಚಿ ಪ್ರಾಂತ್ಯದಲ್ಲಿ ವಾರ್ಷಿಕ ಸೇನಾಭ್ಯಾಸವನ್ನು ಮುಂದುವರಿಸಿ ಉತ್ತರ ಕೊರಿಯಾವನ್ನು ಕೆರಳಿಸಿತ್ತು. ಈ ಎರಡೂ ರಾಷ್ಟ್ರಗಳನ್ನು ಮತ್ತೆ ಕೆಣಕಲು ಕಿಮ್ ಮತ್ತಷ್ಟು ರಾಕೆಟ್ ಎಂಜಿನ್‍ಗಳು ಮತ್ತು ಖಂಡಾಂತರ ಕ್ಷಿಪಣಿಗಳನ್ನು ಉತ್ಪಾದಿಸುವಂತೆ ಆದೇಶ ನೀಡಿದ್ದಾರೆ ಎಂದು ಮಾಧ್ಯಮತ ವರದಿಗಳು ಹೇಳಿವೆ.

Facebook Comments

Sri Raghav

Admin