ಮುಂದಿನ ಚುನಾವಣೆಯಲ್ಲಿ ಬಿಜೆಪಿಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ : ಎಚ್‍ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ
HDK--02
ನವೀಕೃತ ಗೃಹಪ್ರವೇಶ ಮಾಡಿದ ಹೆಚ್ಡಿಕೆ

ಬೆಂಗಳೂರು, ಆ.23- ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆಗಳು ನೀಡಿರುವ ವರದಿ ಹಾಗೂ ತಾವು ನಡೆಸಿದ ಖಾಸಗಿ ಸಂಸ್ಥೆಯ ವರದಿ ಪ್ರಕಾರ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯದಲ್ಲೇ ಮೊದಲ ಸ್ಥಾನಕ್ಕೆ ಬರಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಹುಮತಕ್ಕೆ ಅಗತ್ಯವಿರುವ 113 ಸ್ಥಾನಗಳನ್ನು ಗಳಿಸುವುದೇ ನಮ್ಮ ಗುರಿಯಾಗಿದೆ ಎಂದರು. ಮುಂದಿನ ವಿಧಾನಸಭೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದು, ಬಿಜೆಪಿಗಿಂತ ಕನಿಷ್ಠ 10-15 ಸ್ಥಾನಗಳು ಜೆಡಿಎಸ್‍ಗೆ ಹೆಚ್ಚುವರಿಯಾಗಿ ದೊರೆಯಲಿವೆ ಎಂದು ಹೇಳಿದರು. ವಾಸ್ತವ ಸಂಗತಿಗಳನ್ನು ಆಧರಿಸಿ ಖಾಸಗಿ ಸಂಸ್ಥೆಯಿಂದ ಸಮೀಕ್ಷೆ ನಡೆಸಿದ್ದು, ಬಿಜೆಪಿ, ಕಾಂಗ್ರೆಸ್‍ಗಳಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜಾತಕವೂ ನಮ್ಮ ಬಳಿ ಇದೆ ಎಂದರು.

ಸಿ4 ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್‍ಗೆ ತಾತ್ಕಾಲಿಕವಾಗಿ ಆನಂದ ತಂದಿರಬಹುದು. ಕಾಂಗ್ರೆಸ್‍ಗೆ 24ರಿಂದ 32 ಸ್ಥಾನಗಳು ಬರಬಹುದೇ ಹೊರತು ಕಾಂಗ್ರೆಸ್‍ಗಲ್ಲ ಎಂದು ಅವರು ವ್ಯಂಗ್ಯವಾಡಿದರು. ತಾವು ಕ್ಷೇತ್ರವಾರು ಸಮೀಕ್ಷೆ ನಡೆಸಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗುಪ್ತಚರ ಇಲಾಖೆಗಳ ಚುನಾವಣಾ ಪೂರ್ವ ವರದಿಯ ಮಾಹಿತಿಯು ನಮ್ಮಲ್ಲಿ ಲಭ್ಯವಿದೆ. ರಾಜ್ಯದ ಜನತೆ ಮುಂದಿನ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿಗೆ ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿದರು.

ನವೀಕೃತ ಗೃಹಪ್ರವೇಶ ಮಾಡಿದ ಹೆಚ್ಡಿಕೆ
ನವೀಕೃತ ಗೃಹಪ್ರವೇಶ ಮಾಡಿದ ಹೆಚ್ಡಿಕೆ

ನಮಗೆ ಪೂರ್ಣ ಪ್ರಮಾಣದಲ್ಲಿ ಬಹುಮತ ನೀಡಿ ಮುಂದಿನ ಚುನಾವಣೆಯಲ್ಲಿ ನಮ್ಮ ಸರ್ಕಾರಕ್ಕೆ ಅಧಿಕಾರ ಕೊಟ್ಟರೆ ರಾಜ್ಯದಲ್ಲಿ ಸೂಕ್ತ ಬದಲಾವಣೆ ತರಲಾಗುವುದು. ಲೂಟಿಯಾಗುತ್ತಿರುವ ಸಂಪತ್ತನ್ನು ರಕ್ಷಣೆ ಮಾಡಲಾಗುವುದು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸರಿಯಾದ ಪಾಠ ಹೇಳುವೆ ಎಂದು ಕುಮಾರಸ್ವಾಮಿ ಹೇಳಿದರು. ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೆಂಪಣ್ಣ ಆಯೋಗ ವಾಸ್ತವಾಂಶ ಮತ್ತು ದಾಖಲೆಗಳನ್ನು ಆಧರಿಸಿ ವರದಿ ನೀಡಿದ್ದರೆ ಅವರಿಗೆ ಸೆಲ್ಯೂಟ್ ಹೊಡೆಯುವುದಾಗಿ ತಿಳಿಸಿದರು.

ಇಂತಹ ಘಟನೆಗಳನ್ನೆಲ್ಲಾ ಗಮನಿಸಿದರೆ ಅರ್ಕಾವತಿ ರೀಡು ಪ್ರಕರಣದಲ್ಲಿ ಕ್ಲೀನ್‍ಚೀಟ್ ಕೊಡಬಹುದು ಎಂದೆನಿಸುತ್ತದೆ ಎಂದರು.
ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ ಸಿ4 ಸಂಸ್ಥೆಯ ಮಾಲೀಕರು ಕೆಂಪಯ್ಯನವರು ಗೃಹ ಇಲಾಖೆಯ ಸಚಿವರು ಎಂದು ವೆಬ್‍ಸೈಟ್‍ನಲ್ಲಿ ಪ್ರಕಟಿಸಿಕೊಂಡಿದ್ದಾರೆ. ಕಾಂಗ್ರೆಸ್‍ನ ಸಚಿವರೊಂದಿಗಿರುವ ಫೋಟೋವನ್ನು ಹಾಕಿದ್ದಾರೆ. ಇಂತಹ ಸಂಸ್ಥೆಯಿಂದ ಇನ್ನೆಂಥ ಸಮೀಕ್ಷೆ ಬರಹುದು ಎಂದು ವ್ಯಂಗ್ಯವಾಡಿದರು. ಅರ್ಕಾವತಿ ಬಡಾವಣೆ ಕರ್ಮಕಾಂಡ ಒಂದೇ ಸಾಕಾಗುತ್ತದೆ. ಹೆಚ್ಚೇನು ಹೇಳಬೇಕಾಗಿಲ್ಲ ಎಂದ ಅವರು, ಅರ್ಕಾವತಿ ರೀಡು ಪ್ರಕರಣ ಹಗಲು ದರೋಡೆ ಎಂದು ಆರೋಪಿಸಿದ ಕುಮಾರಸ್ವಾಮಿ, ನಿಮಗೆ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ನವೀಕೃತ ಗೃಹಪ್ರವೇಶ ಮಾಡಿದ ಹೆಚ್ಡಿಕೆ
ನವೀಕೃತ ಗೃಹಪ್ರವೇಶ ಮಾಡಿದ ಹೆಚ್ಡಿಕೆ

ತಮ್ಮ ವಿರುದ್ಧ ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ನಡೆಸುತ್ತಿರುವ ತನಿಖೆಯಿಂದ ಸತ್ಯಾಂಶ ಹೊರ ಬರಬೇಕಾಗಿಲ್ಲ. ಮುಂದಿನ ಚುನಾವಣೆ ವರೆಗೂ ಮಾಧ್ಯಮಗಳಿಗೆ ಆಹಾರವಾಗುವಂತೆ ಜೀವಂತ ಇಟ್ಟುಕೊಳ್ಳಲಾಗಿದೆ ಎಂದು ಆರೋಪಿಸಿದರು. ಗಾಜಿನ ಮನೆಯಲ್ಲಿ ಕೂತು ವಿರೋಧ ಪಕ್ಷಗಳನ್ನು ಕೆರಳಿಸಬೇಡಿ. ಹೆಚ್ಚುವರಿ ಮುಖ್ಯಕಾರ್ಯದರ್ಶಿ ಆಗಿದ್ದ ಉಮೇಶ್ ಅವರು ನೀಡಿದ್ದ ವರದಿ ಪ್ರಕಾರ ಎಷ್ಟು ಜನ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದ್ದೀರಿ ? ಭ್ರಷ್ಟಾಚಾರ, ಪ್ರಾಮಾಣಿಕತೆ ಬಗ್ಗೆ ಮಾತನಾಡುವ ನೀವು ಮರಳು ದಂಧೆ, ಮಟ್ಕಾ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.

Facebook Comments

Sri Raghav

Admin