ರಾಮ ದೇವಾಲಯದಲ್ಲಿ ದಲಿತರಿಗೆ ನಿಷೇಧ : ಕಾನ್ಪುರ ಪ್ರಕ್ಷುಬ್ಧ

ಈ ಸುದ್ದಿಯನ್ನು ಶೇರ್ ಮಾಡಿ

Kanpiur--01

ಕಾನ್ಪುರ, ಆ.23- ಯೋಗಿ ರಾಜ್ಯದಲ್ಲಿ ದಲಿತರು ದೇವಾಲಯಕ್ಕೆ ಬಾರದಂತೆ ನಿಷೇಧಿಸಿರುವ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ ಹಮೀರ್‍ಪುರ್ ಜಿಲ್ಲೆಯ ಮೌದಾಹಾ ಎಂಬಲ್ಲಿ ಜಾನಕಿ ರಾಮ ದೇವಾಲಯಕ್ಕೆ ದಲಿತರ ಪ್ರವೇಶ ನಿಷೇಧಿಸಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಪ್ರಕ್ಷುಬ್ದಗೊಂಡಿದೆ.  ಅಖಂಡ ರಾಮಾಯಣ ಪಥ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಎಲ್ಲ ದಲಿತರನ್ನು ದೇವಸ್ಥಾನದಿಂದ ಆಚೆ ಕಳುಹಿಸುವಂತೆ ಅರ್ಚಕ ಕನ್ವರ್ ಬಹದ್ದೂರ್ ಸಿಂಗ್ ಸೂಚನೆ ನೀಡಿದ್ದರು. ಇದರಿಂದ ರೊಚ್ಚಿಗೆದ್ದ ದಲಿತರು ಪ್ರತಿಭಟನೆ ನಡೆಸಿದರು.

ರಾಮಾಯಣ ಕಂಠಪಾಠದ ಸಲುವಾಗಿ ಅನೇಕ ಮಕ್ಕಳೂ ಸೇರಿದಂತೆ ಹಲವರು 10 ಕಿ.ಮೀ. ದೂರದ ಮೌದಾಹಾದಿಂದ ಕಾಲ್ನಡಿಗೆಯಲ್ಲಿ ಮಂದಿರಕ್ಕೆ ಆಗಮಿಸಿದ್ದರು. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿ ಸುರೇಶ್ ಮಿಶ್ರಾ ಹೇಳಿದ್ದಾರೆ. ಕಂದಾಯ ಇಲಾಖೆಯಿಂದ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

Facebook Comments

Sri Raghav

Admin