ರಿಜಿಸ್ಟ್ರರ್ ಆಫೀಸ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾಮಣಿ

ಈ ಸುದ್ದಿಯನ್ನು ಶೇರ್ ಮಾಡಿ

Priyamani--01

ಬೆಂಗಳೂರು, ಆ. 23- ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಚಿರಪರಿಚಿತರಾಗಿರುವ ನಟಿ ಪ್ರಿಯಾಮಣಿ ಅವರು ಇಂದು ಉದ್ಯಮಿ ಮುಸ್ತಾಫರಾಜನನ್ನು ವರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊದಲೇ ನಿಯೋಜಿಸಿದಂತೆ ಸರಳ ವಿವಾಹ ಮಾಡಿಕೊಂಡಿರುವ ಪ್ರಿಯಾ ಹಾಗೂ ಮುಸ್ತಾಫ ಅವರು ಇಂದು ಜಯನಗರದ ರಿಜಿಸ್ಟ್ರರ್ ಆಫೀಸ್ ನಲ್ಲಿ ಹಾರ ಬದಲಾಯಿಸಿಕೊಳ್ಳುವ ಮೂಲಕ ವಿವಾಹವಾಗಿದ್ದಾರೆ.

Priyamani-Marriage

ಕಳೆದ ವರ್ಷವೇ ಪ್ರಿಯಾಮಣಿ ಹಾಗೂ ಮುಸ್ತಾಫರ ನಿಶ್ಚಿತಾರ್ಥ ನಡೆದಿದ್ದು ಅಂದಿನಿಂದಲೂ ಇವರ ವಿವಾಹದ ಬಗ್ಗೆ ಸಾಕಷ್ಟು ಸುದ್ದಿಗಳು ಹರಡಿದ್ದವು ಇಂದು ಅದಕ್ಕೆ ತೆರೆ ಬಿದ್ದಿದೆ. ಇಂದು ನಡೆದ ವಿವಾಹ ಮಹೋತ್ಸವದ ವೇಳೆ ಪ್ರಿಯಾಮಣಿ ಹಾಗೂ ಮುಸ್ತಾಫರ ಕುಟುಂಬದವರಷ್ಟೇ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ತಮ್ಮ ಸ್ನೇಹಿತರು ಹಾಗೂ ಬಂಧು ಬಳಗದವರಿಗಾಗಿ ನಾಳೆ ಅದ್ದೂರಿ ವಿವಾಹ ಆರತಕ್ಷತೆಯನ್ನು ಕೊತ್ತನೂರಿನ ಎಲೆನ್ ಕನ್ವೆಷನ್ ಹಾಲ್‍ನಲ್ಲಿ ನಡೆಯಲಿದೆ.

ವಿವಾಹ ನಂತರವೂ ನಟಿಸುವೆ:

ಉಲ್ಲಾಂ ಎಂಬ ತಮಿಳು ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಪ್ರಿಯಾಮಣಿಗೆ ಪರತುವೀರನ್ ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಬಂದಿದೆ. ರಾಮ್ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರಿಯಾಮಣಿ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಚಿತ್ರಗಳಲ್ಲಿ ನಟಿಸುವ ಮೂಲಕ ಪಂಚಭಾಷಾ ನಟಿಯಾಗಿ ರೂಪುಗೊಂಡಿದ್ದಾರೆ. ಮದುವೆಯ ನಂತರವೂ ನಟನೆಯಲ್ಲಿ ಮುಂದುವರೆಯುತ್ತೇನೆ ಎಂದು ಹೇಳಿರುವ ಪ್ರಿಯಾಮಣಿ ಅವರು ಕನ್ನಡ ವ್ಯೂಹ, ತಮಿಳಿನ ಅಜಂತಾಚಾಂಡಿ, ಕಾದಲ್‍ಮುಡಿಚು, ತೆಲುಗಿನ ಅಂಗುಲಿಕಾ, ಪ್ರಿಯತಮಾ ರಾವೆ, ಮಲಯಾಳಂನ ಪಾಪಾ, ಫೈಟಿಂಗ್ ಲೈಫ್ ಚಿತ್ರಗಳು ಬಿಡುಗಡೆಯ ಹೊಸ್ತಿನಲ್ಲಿದೆ. ಮದುವೆಯ ನಂತರವೂ ನಟಿಸುತ್ತೇನೆ ಎಂದು ಪ್ರಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅದ್ಧೂರಿ ವಿವಾಹಗಳು ನಡೆಯುತ್ತಿರುವ ಈ  ದಿನಗಳಲ್ಲಿ ಪ್ರಿಯಾಮಣಿ ಸರಳ ವಿವಾಹ ಮಾಡಿಕೊಂಡಿರುವುದು ಮೆಚ್ಚುವಂತಹ ವಿಷಯವಾಗಿದೆ.

Priyamani--05

Priyamaini-06

Priyaman-i-04

Facebook Comments

Sri Raghav

Admin