2022ರ ವೇಳೆಗೆ 15 ಲಕ್ಷ ಉದ್ಯೋಗ ಸೃಷ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

kharge

ಬೆಂಗಳೂರು, ಆ.23- ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಹೆಚ್ಚಿನ ಅವಕಾಶವಿದೆ. 2022ರ ವೇಳೆಗೆ 15 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮಾಹಿತಿ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಖಾಸಗಿ ಹೊಟೇಲ್‍ನಲ್ಲಿ ಮಾಹಿತಿ- ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಆ್ಯನಿಮೇಷನ್ ಕ್ಷೇತ್ರದ ಉದ್ಯಮ ಮುಖಂಡರ ಜತೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ಡಿಜಿಟಲ್ ಆರ್ಟ್ ಸೆಂಟರ್ ಜತೆಗೆ ಇನ್ನೂ 11 ಸೆಂಟರ್‍ಗಳನ್ನು ಮಾಡಲಾಗುವುದು.2022ರ ವೇಳೆಗೆ 50 ಡಿಜಿಟಲ್ ಆರ್ಟ್ ಸೆಂಟರ್‍ಗಳು ಪ್ರಾರಂಭವಾಗಲಿವೆ ಎಂದು ತಿಳಿಸಿದರು.

ಕಂಪೆನಿಗಳಿಗೆ ಸರ್ಕಾರ ಯಾವುದೇ ಪಾಲಿಸಿಯ ಒತ್ತಡ ಹೇರುವುದಿಲ್ಲ. ಕಂಪೆನಿಗಳು ಹೇಳಿದಂತೆ ನಡೆದುಕೊಳ್ಳಲಾಗಿದೆ. ಹಾಗಾಗಿ ಕರ್ನಾಟಕದಲ್ಲಿ ಹಲವಾರು ಕಂಪೆನಿಗಳು ಯಶಸ್ವಿಯಾಗಿವೆ ಎಂದರು. ಬೆಂಗಳೂರು ಸಿಲಿಕಾನ್ ಸಿಟಿ, ಕೂಲ್ ಸಿಟಿ, ಕ್ರಿಯಾಶೀಲ ನಗರ ಎಂಬ ಹೆಸರು ಪಡೆದಿದೆ. ನಗರದ ಎಲ್ಲ ಭಾಗಗಳಲ್ಲೂ ಹೂಡಿಕೆ ಮಾಡಲು ವಿಫುಲ ಅವಕಾಶವಿದೆ. ಇಂದಿನ ಪಾಲಿಸಿ ವಿಫಲವಾಗಲು ಸಾಧ್ಯವಿಲ್ಲ ಎಂದರು.ಇತ್ತೀಚೆಗೆ ಎಲಿವೇಟ್-100 ಎಂಬ ಹೊಸ ಕಾರ್ಯಕ್ರಮವನ್ನು ಘೋಷಿಸಲಾಗಿದೆ. ಇದರಲ್ಲಿ 1700 ಅರ್ಜಿಗಳು ಬಂದಿವೆ. ಅದರಲ್ಲಿ 48 ಕಂಪೆನಿಗಳು ಆ್ಯನಿಮೇಷನ್‍ಗೆ ಸಂಬಂಧಿಸಿದ್ದಾಗಿದೆ. ಇವುಗಳಲ್ಲಿ 33 ಕಂಪೆನಿಗಳು ಅರ್ಹತೆ ಪಡೆದಿವೆ.

ನೆಕ್ಸ್ಟ್ ಜೆನ್ ಕೆಎವಿಜಿಸಿ ನೀತಿಯು ಕೌಶಲ್ಯಾಭಿವೃದ್ಧಿ, ಮೂಲ ಸೌಕರ್ಯ ಬೆಳವಣಿಗೆ, ವ್ಯವಸ್ಥೆಯ ವಿಸ್ತರಣೆ, ಮಾರ್ಕೆಟಿಂಗ್ ಬೆಂಬಲ ಹಾಗೂ ಹಣಕಾಸು ರಿಯಾಯಿತಿ, ಪ್ರೊತ್ಸಾಹ ಧನಗಳನ್ನು ಒಳಗೊಂಡಿದೆ ಎಂದು ಹೇಳಿದರು. ಜಾಗತಿಕ ಉತ್ಪಾದನೆಯನ್ನು ಆಕರ್ಷಿಸಿ ರಫ್ತು ಉತ್ತೇಜನ ಮಾಡುವುದು ನಮ್ಮ ಗುರಿಯಾಗಿದೆ. ಮೂಲ ಐಪಿ ಮತ್ತು ಶಾರ್ಟ್ ಫಿಲಂಗಳ ವಿಚಾರದಲ್ಲಿ ದೇಶಿ ಪ್ರೊಡಕ್ಷನ್‍ಗಳಿಗೆ ಪ್ರೊೀತ್ಸಾಹ ನೀಡುವುದು ಮತ್ತು ಗೇಮ್ ಅಭಿವೃದ್ಧಿ, ವರ್ಚುವಲ್ ರಿಯಾಲಿಟಿ, ಆಗ್ಮೆಂಟೆಡ್ ರಿಯಾಲಿಟಿ ಮತ್ತು ಶೈಕ್ಷಣಿಕ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಸ್ಟಾರ್ಟ್‍ಅಪ್‍ಅನ್ನು ಪ್ರೊೀತ್ಸಾಹಿಸಲಾಗುವುದು ಎಂದು ತಿಳಿಸಿದರು.

ಎಬಿವಿಐ ಕಾರ್ಯದರ್ಶಿ ಆದಿಶಯನ್ ಮಾತನಾಡಿ, ಯಶಸ್ವಿ ಡಿಜಿಟಲ್ ಆಟ್ರ್ಸ್ ಸೆಂಟರ್ ಪ್ರೊೀಗ್ರಾಂಗೆ ಪೂರಕವಾಗಿ ಕರ್ನಾಟಕದಲ್ಲಿ ಡಿಜಿಟಲ್ ಆಟ್ರ್ಸ್ ಸೆಂಟರ್‍ಅನ್ನು 7 ರಿಂದ 50ಕ್ಕೆ ಹೆಚ್ಚಿಸಲು ಕೆಎವಿಜಿಸಿ ನೀತಿ ಉದ್ದೇಶಿಸಿದೆ ಎಂದರು.  ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಟೆಕ್ನಿಕಲರ್ ಇಂಡಿಯಾ ದೇಶೀಯ ಮುಖ್ಯಸ್ಥ ಬೀರೇನ್ ಘೋಷ್, ರಾಜೇಶ್‍ರಾವ್, ನಂದೀಶ್, ರಾಜೇಶ್ ಮಿಶ್ರ, ಪ್ರದೀಪ್ ನಾಯರ್ ಮತ್ತಿತರರು ಪಾಲ್ಗೊಂಡಿದ್ದರು.   ಕರ್ನಾಟಕ ಆ್ಯನಿಮೇಷನ್ ವಿಶುವಲ್ ಎಫೆಕ್ಟ್ಸ್ ಗೇಮಿಂಗ್ ಮತ್ತು ಕಾಮಿಕ್ಸ್ ನೀತಿಯನ್ನು ಈ ವೇಳೆ ಸರ್ಕಾರ ಘೋಷಿಸಿತು.

Facebook Comments

Sri Raghav

Admin