ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸಮರ್ಥರಾದವರಿಗೆ ಯಾವುದು ತಾನೇ ಹೆಚ್ಚು ಭಾರವಾಗುತ್ತದೆ? ಪ್ರಯತ್ನಶೀಲರಿಗೆ ದೂರವಾವುದು? ವಿದ್ಯೆಯುಳ್ಳವರಿಗೆ ಪರದೇಶ ವಾವುದು? ಪ್ರಿಯವಾದ ಮಾತುಗಳನ್ನಾಡುವವರಿಗೆ ಯಾರು ತಾನೇ ಶತ್ರುವಾಗುತ್ತಾರೆ..? – ಹಿತೋಪದೇಶ, ಸುಹೃದ್ಭೇದ

Rashi

ಪಂಚಾಂಗ : ಗುರುವಾರ, 24.08.2017

ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.36
ಚಂದ್ರ ಉದಯ ಬೆ.08.16 / ಚಂದ್ರ ಅಸ್ತ ರಾ.08.41
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ : ತೃತೀಯಾ (ರಾ.08.27)
ನಕ್ಷತ್ರ: ಉತ್ತರಫಲ್ಗುಣಿ (ಮ.02.00) / ಯೋಗ: ಸಾಧ್ಯ (ರಾ.12.20)
ಕರಣ: ತೈತಿಲ-ಗರಜೆ (ಬೆ.08.40-ರಾ.08.27) / ಮಳೆ ನಕ್ಷತ್ರ: ಮಖ
ಮಾಸ: ಸಿಂಹ / ತೇದಿ: 08

ಇಂದಿನ ವಿಶೇಷ :   ವರಾಹ ಜಯಂತಿ, ಸ್ವರ್ಣಗೌರಿ ವ್ರತ

ರಾಶಿ ಭವಿಷ್ಯ :

ಮೇಷ : ಆರೋಗ್ಯದಲ್ಲಿ ಸಾಮಾನ್ಯ ತೊಂದರೆ ಬಂದರೂ ನಿಧಾನವಾಗಿ ಚೇತರಿಸಿಕೊಳ್ಳುವಿರಿ
ವೃಷಭ : ಹಿರಿಯರಿಂದ ಅವಮಾನವಾಗಬಹುದು
ಮಿಥುನ: ಸ್ತ್ರೀಯರಿಂದ ಹಣ ವ್ಯಯವಾಗಬಹುದು
ಕಟಕ : ಯಾವುದೇ ತೊಂದರೆ ಇಲ್ಲದೆ ನಿಮ್ಮ ಗುರಿ ತಲುಪುತ್ತೀರಿ, ಉತ್ತಮ ಭಾಷಣ ಮಾಡುವಿರಿ
ಸಿಂಹ: ಸಿನಿಮಾ ನಟ- ನಟಿಯರಿಗೆ, ಕಲಾವಿದರಿಗೆ ವೃತ್ತಿಯಲ್ಲಿ ಪ್ರಗತಿ ಸಿಗುತ್ತದೆ
ಕನ್ಯಾ: ಮಾವನ ಮನೆಯಿಂದ ಧನ ಸಹಾಯ ಸಿಗಬಹುದು
ತುಲಾ: ರಾಜಕೀಯ ಕ್ಷೇತ್ರದಲ್ಲಿ ರುವವರು ಅಪರಾಧ ಪ್ರಕರಣ ಗಳಲ್ಲಿ ಸಿಲುಕಬಹುದು

ವೃಶ್ಚಿಕ : ಬಂಧು-ಮಿತ್ರರಲ್ಲಿ ವೈಮನಸ್ಸು ಜಾಸ್ತಿಯಾಗುತ್ತದೆ
ಧನುಸ್ಸು: ಪ್ರತಿಯೊಂದು ವ್ಯವಹಾರಗಳನ್ನು ತಾಳ್ಮೆ ಮತ್ತು ಸಮಾಧಾನದಿಂದ ಮಾಡುವುದು ಒಳ್ಳೆಯದು
ಮಕರ: ಪತಿ-ಪತ್ನಿಯರ ನಡುವೆ ಗೊಂದಲ, ಸಮಸ್ಯೆಗಳು ಕಂಡುಬರುವ ಸಾಧ್ಯತೆಗಳಿವೆ
ಕುಂಭ: ವಾದ-ವಿವಾದಕ್ಕೆ ಉತ್ತಮ ದಿನವಲ್ಲ
ಮೀನ: ಹಿರಿಯರ ಆಶೀರ್ವಾದದಿಂದ ಶುಭವಾಗಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin