‘ಏ ಹಂದಿ, ಭಾರತಕ್ಕೆ ತೊಲಗು’ ಎಂದು ಸಿಇಒಗೆ ನಿಂದಿಸಿದ ಅಮೆರಿಕ ಮಹಿಳೆ

ಈ ಸುದ್ದಿಯನ್ನು ಶೇರ್ ಮಾಡಿ

CEO

ನ್ಯೂಯಾರ್ಕ್, ಆ.24- ಶಾರ್ಲಟ್ಸ್ ವಿಲ್‍ನಲ್ಲಿ ನಡೆದ ವ್ಯಾಪಕ ಹಿಂಸಾಚಾರದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯಸೂಚಿಯನ್ನು ತಾನು ಬೆಂಬಲಿಸುವುದಿಲ್ಲ ಎಂದು ಪ್ರತಿವಾದಿಸಿ ಪತ್ರಿಕೆಯೊಂದರಲ್ಲಿ ಲೇಖನ ಬರೆದ ಭಾರತ ಮೂಲಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಒಬ್ಬರನ್ನು ಜನಾಂಗೀಯವಾಗಿ ನಿಂದಿಸಲಾಗಿದೆ.

ಜಿಎಂಎಂ ನಾನ್‍ಸ್ಟಿಕ್ ಕೋಟಿಂಗ್ಸ್ ಕಂಪನಿಯ ಸಿಒಇ ರವೀನ್ ಗಾಂಧಿ ಅವರಿಗೆ ಈಮೇಲ್ ಮತ್ತು ಟ್ವೀಟರ್‍ನಲ್ಲಿ ಜನಾಂಗೀಯ ದಾಳಿ ನಡೆಸಲಾಗಿದೆ. ಇದರಲ್ಲಿ ಮಹಿಳೆಯೊಬ್ಬಳು : ನೀನೊಬ್ಬ ಭಾರತೀಯ ಹಂದಿ..ಎಂದು ವಾಯ್ಸ್ ಮೇಲ್‍ನಲ್ಲಿ ಹಾಕಿದ್ದಾಳೆ. ಇದನ್ನು ರವೀನ್ ಯು ಟ್ಯೂಬ್‍ನಲ್ಲಿ ಹಾಕಿದ್ದಾರೆ. ತೊಟ್ಟಿಯಲ್ಲಿರುವ ನಿನ್ನ ವಸ್ತುಗಳನ್ನು ತೆಗೆದುಕೊಂಡು ಭಾರತಕ್ಕೆ ಹಿಂದಿರುಗಿ ಅಲ್ಲಿ ಅದನ್ನು ಮಾರಾಟ ಮಾಡು ಎಂದು ಆ ಮಹಿಳೆ ನಿಂದಿಸಿದ್ದಾಳೆ.

Facebook Comments

Sri Raghav

Admin