ಖಾಸಗಿತನ ಹಕ್ಕು ತೀರ್ಪನ್ನು ಸ್ವಾಗತಿಸಿದ ಚಿದಂಬರಂ, ಕಮಲ್ ಹಾಸನ್

ಈ ಸುದ್ದಿಯನ್ನು ಶೇರ್ ಮಾಡಿ

Adhaar--01

ಚೆನ್ನೈ, ಆ.24-ಖಾಸಗಿತನ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪನ್ನು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಮತ್ತು ಖ್ಯಾತ ನಟ ಕಮಲ್ ಹಾಸನ್ ಸ್ವಾಗತಿಸಿದ್ಧಾರೆ. ಖಾಸಗಿತನವು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಪಿ.ಚಿದಂಬರಂ ಹೇಳಿದ್ದು, ಸುಪ್ರೀಂಕೋರ್ಟ್‍ನ ಒಮ್ಮತದ ತೀರ್ಪನ್ನು ಪ್ರಶಂಸಿಸಿದ್ದಾರೆ.

ನಟ ಕಮಲ್‍ಹಾಸನ್ ಸಹ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಶ್ಲಾಘಿಸಿದ್ದಾರೆ. ಖಾಸಗಿತನವು ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿರುವುದು ಸರಿಯಾಗಿದೆ. ಇದಕ್ಕಾಗಿ ನ್ಯಾಯಮೂರ್ತಿಗಳಿಗೆ ಜನರು ಕೃತಜ್ಞತೆ ತಿಳಿಸಬೇಕೆಂದು ಅವರು ಹೇಳಿದ್ದಾರೆ. ಕಾನೂನು ತಜ್ಞರೂ ಸಹ ಸುಪ್ರೀಂಕೋರ್ಟ್‍ನ ಮಹತ್ವದ ತೀರ್ಪನ್ನು ಸ್ವಾಗತಿಸಿದ್ದಾರೆ.

Facebook Comments

Sri Raghav

Admin