ತ್ವರಿತ ನಿರ್ಧಾರ ಕೈಗೊಳ್ಳಿ, ಅಧಿಕಾರಿಗಳಿಗೆ ಪ್ರಧಾನಿ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

Modi--.121

ನವದೆಹಲಿ, ಆ.24-ಕ್ರಮಬದ್ಧ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮತ್ತು ತ್ವರಿತ ನಿರ್ಧಾರಗಳನ್ನು ಕೈಗೊಳ್ಳುವಂತೆ ಸರ್ಕಾರದ ಎಲ್ಲ ಇಲಾಖೆಗಳಿಗೆ ಸಲಹೆ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಸದುದ್ದೇಶದೊಂದಿಗೆ ಕೈಗೊಳ್ಳುವ ಪ್ರಾಮಾಣಿಕ ನಿರ್ಧಾರ ಸದಾ ಪ್ರೋತ್ಸಾಹಿಸ್ಪಡುತ್ತದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ 70ಕ್ಕೂ ಹೆಚ್ಚುವರಿ ಕಾರ್ಯದರ್ಶಿಗಳು ಮತ್ತು ಜಂಟಿ ಕಾರ್ಯದರ್ಶಿಗಳ ಸಮೂಹದೊಂದಿಗೆ ನಿನ್ನೆ ರಾತ್ರಿ ನಡೆಸಿದ ಸಂವಾದದ ವೇಳೆ, ಉತ್ತಮ ಆಡಳಿತವು ಆಧಿಕಾರಿಗಳ ಆದ್ಯತೆಯಾಗಬೇಕು ಎಂದು ಪ್ರಧಾನಿ ತಿಳಿಸಿದ್ದಾರೆ. ಭಾರತದ 100 ತೀರಾ ಹಿಂದುಳಿದ ಜಿಲ್ಲೆಗಳತ್ತ ಗಮನ ಕೇಂದ್ರೀಕರಿಸುವಂತೆ ಅಧಿಕಾರಿಗಳಿಗೆ ಸಲಹೆ ಮಾಡಿದ ಮೋದಿ, ಈ ಮೂಲಕ ವಿವಿಧ ಅಭಿವೃದ್ಧಿ ಮಾನದಂಡಗಳ ಮೂಲಕ ಅವುಗಳನ್ನು ರಾಷ್ಟ್ರೀಯ ಸರಾಸರಿ ಮಟ್ಟದತ್ತ ತರಬಹುದಾಗಿದೆ ಎಂದು ಹೇಳಿದರು.

ಅಭಿವೃದ್ದಿ ಮತ್ತು ಉತ್ತಮ ಆಡಳಿತದ ಸಂಯೋಜನೆಯು ಸಮಾಜ ಕಲ್ಯಾಣ ಮತ್ತು ಪೌರರ ತೃಪ್ತಿಗೆ ಅಗತ್ಯವಾದ ಅಂಶವಾಗಿದೆ. ಸರ್ಕಾರದ ಎಲ್ಲ ಇಲಾಖೆಗಳು ಮತ್ತು ಘಟಕಗಳು ಪರಸ್ಪರ ಸೌಹಾರ್ದತೆಯಿಂದ ಹಾಗೂ ಕ್ರಮಬದ್ಧವಾಗಿ ಕಾರ್ಯನಿರ್ವಹಿಸಿ ಉತ್ತಮ ಫಲಿಶಾಂಶ ಹೊರಹೊಮ್ಮುವ ಸಾಧನೆ ಮಾಡಬೇಕೆಂದು ಕರೆ ಅವರು ಕರೆ ನೀಡಿದರು.  ಸರ್ಕಾರ ವಿವಿಧ ಇಲಾಖೆಗಳ ನಡುವೆ ಪರಿಣಾಮಕಾರಿ ಆಂತರಿಕ ಸಂವಹನ ಬಹಳ ಮುಖ್ಯ ಎಂಬುದನ್ನು ಪ್ರತಿಪಾದಿಸಿದ ಅವರು, ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವಾಗ ಸಮಾಜ ಬಡವರು, ದುರ್ಬಲರು ಮತ್ತು ಮಧ್ಯಮವರ್ಗಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ಪ್ರಧಾನಿ ಅಧಿಕಾರಿಗಳ ಸಮುದಾಯಕ್ಕೆ ಕಿವಿ ಮಾತು ಹೇಳಿದರು.

Facebook Comments

Sri Raghav

Admin