ನಾಳೆಯಿಂದಲೇ ಚಲಾವಣೆಗೆ ಬರುತ್ತಿದೆ 200ರೂ. ಮುಖಬೆಲೆಯ ಹೊಸ ನೋಟು

ಈ ಸುದ್ದಿಯನ್ನು ಶೇರ್ ಮಾಡಿ

200-notes--01

ನವದೆಹಲಿ/ಮುಂಬೈ, ಆ.24- ದೇಶದ ಜನತೆ ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ 200ರೂ.ಗಳ ಕರೆನ್ಸಿಗಳನ್ನು ಕೇಂದ್ರ ಸರ್ಕಾರ ನಾಳೆಯಿಂದಲೇ ಬಿಡುಗಡೆ ಮಾಡಲಿದೆ. ಗಣೇಶ ಹಬ್ಬದ ಪ್ರಯುಕ್ತ ಈ ಹೊಸ ನೋಟು ನಾಳೆ ಬಿಡುಗಡೆಯಾಗಲಿದೆ ಎಂದು ಕೇಂದ್ರ ಸರ್ಕಾರ ಇಂದು ಅಧಿಕೃತ ಪ್ರಕಟಣೆ ಹೊರಡಿಸಿದೆ. ಈ ಹೊಸ ನೋಟುಗಳು ಮೈಸೂರಿನ ಟಂಕ ಶಾಲೆಯಲ್ಲಿ ಮುದ್ರಿತವಾಗಿರುವುದು ವಿಶೇಷ.ಗಾಡಾ ಹಳದಿ ಬಣ್ಣದ 200ರೂ. ನೋಟು 66ಗಿ146 ಮಿಲಿಮೀಟರ್ ಅಳತೆ ಹೊಂದಿದೆ.

ಹೊಸ 200ರೂ. ಕರೆನ್ಸಿಯನ್ನು ಅತಿಶೀಘ್ರವಾಗಿ ಬಿಡುಗಡೆ ಮಾಡುವುದಾಗಿ ನಿನ್ನೆಯಷ್ಟೇ ಕೇಂದ್ರ ಸರ್ಕಾರ ತಿಳಿಸಿತ್ತು. ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ಹೊಸ ನೋಟುಗಳ ಬಿಡುಗಡೆಗೆ ಹಸಿರು ನಿಶಾನೆ ತೋರಿಸಿದೆ. ಇದೇ ವೇಳೆ 2000ರೂ.ಗಳನ್ನು ರದ್ದುಗೊಳಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

Facebook Comments

Sri Raghav

Admin