ಲಂಕಾ ವಿರುದ್ಧ 2ನೇ ಏಕದಿನ ಪಂದ್ಯ, ಭಾರತಕ್ಕೆ 237 ರನ್’ಗಳ ಟಾರ್ಗೆಟ್

ಈ ಸುದ್ದಿಯನ್ನು ಶೇರ್ ಮಾಡಿ

Cricket

ಕ್ಯಾಂಡಿ. ಆ. 24 : ಪಲ್ಲೆಕೆಲೆಯ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ 2 ನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ 236 ರನ್ ಗಳಿಸಿದೆ. ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 236 ರನ್ ಗಳಿಸಿದ್ದು, ಭಾರತದ ಗೆಲುವಿಗೆ 237 ರನ್ ಗಳ ಟಾರ್ಗೆಟ್ ನೀಡಿದೆ. ಭಾರತದ ಪರವಾಗಿ ಜಸ್ ಪ್ರೀತ್ ಬೂಮ್ರಾ 4, ಯಜುವೇಂದ್ರ ಚಾಹಲ್ 2, ಹಾರ್ದಿಕ್ ಪಾಂಡ್ಯ 1, ಅಕ್ಷರ್ ಪಟೇಲ್ 1 ವಿಕೆಟ್ ಗಳಿಸಿದರು.

ಲಂಕಾ ಪರವಾಗಿ ನಿರೊಶಾನ್ ಡಿಕ್ವೆಲ್ಲಾ 31, ಧನುಷ್ಕ ಗುಣತಿಲಕ 19, ಕುಶಾಲ್ ಮೆಂಡಿಸ್ 19, ಉಪುಲ್ ತರಂಗ 9, ಏಂಜಲೊ ಮ್ಯಾಥ್ಯೂಸ್ 20, ಮಿಲಿಂದಾ ಸಿರಿವರ್ಧನ 58, ಚಾಮರಾ ಕಪುಗೆದೆರಾ 40, ಅಖಿಲ ಧನಂಜಯ 9, ದುಷ್ಮಂತ ಚಾಮಿರಾ ಅಜೇಯ 6, ವಿಶ್ವ ಫೆರ್ನಾಂಡೊ ಅಜೇಯ 3 ರನ್ ಗಳಿಸಿದ್ದಾರೆ.

ಧೋನಿ ದಾಖಲೆ :

ಟೀಂ ಇಂಡಿಯಾ ಮಾಜಿ ನಾಯಕ, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ 99 ಸ್ಟಂಪಿಂಗ್ ಮಾಡುವ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ದಾಖಲೆ ಸರಿಗಟ್ಟಿದ್ದಾರೆ. ಇದುವರೆಗೆ ಅತಿಹೆಚ್ಚು ಸ್ಟಂಪಿಂಗ್ ಮಾಡಿರುವ ದಾಖಲೆ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ಹೆಸರಲ್ಲಿತ್ತು.

Facebook Comments

Sri Raghav

Admin