ಅತ್ಯಾಚಾರಿ ಬಾಬಾನನ್ನು ಹಾಡಿ ಹೊಗಳಿದ್ದ ಪ್ರಧಾನಿ ಮೋದಿ…!

ಈ ಸುದ್ದಿಯನ್ನು ಶೇರ್ ಮಾಡಿ

Ram-Rahim--Singh--01

ನವದೆಹಲಿ, ಆ.26-ಇಬ್ಬರು ಸಾಧ್ವಿಯರ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಿಂದ ಅಪರಾಧಿ ಎಂದು ಘೋಷಿಸಲ್ಪಟ್ಟು ಜೈಲಿನಲ್ಲಿ ರೊಟ್ಟಿ ಮುರಿಯುತ್ತಿರುವ ಸ್ವಘೋಷಿತ ದೇವಮಾನವ ಬಾಬಾ ಗುರ್‍ಮೀತ್ ರಾಮ್‍ರಹೀಂ ಸಿಂಗ್‍ನನ್ನು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಹೊಗಳಿದ್ದ ಟ್ವೀಟ್ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ವಚ್ಚ ಭಾರತ್ ಅಭಿಯಾನದಲ್ಲಿ ಕೈಜೋಡಿಸಿದ್ದಕ್ಕಾಗಿ ಬಾಬಾಗೆ ಧನ್ಯವಾದಗಳನ್ನು ಸಲ್ಲಿಸಿ ಅವರು ಟ್ವೀಟ್ ಮಾಡಿದ್ದರು. ಬಾಬಾ ರಾಮ್ ರಹೀಂ ಜೀ ಹಾಗೂ ಅವರ ತಂಡ ಅಭಿನಂದನಾರ್ಹ ಪ್ರಯತ್ನ ನಡೆಸಿದೆ ಎಂದು ಮೋದಿ ಪ್ರಶಂಸಿಸಿದ್ದರು.

ಇದಲ್ಲದೇ, 2014ರ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಮೋದಿ, ನಾನು ಗುರುಮೀತ್ ರಾಮ್‍ರಹೀಂ ಸಿಂಗ್ ಜೀ ಮಸ್ತಾನ್ ಜೀ ಅವರಿಗೆ ಹಾಗೂ ಅವರ ಡೇರಾ ಸಚ್ಚಾ ಸೌಧಕ್ಕೆ ಸೆಲ್ಯೂಟ್ ಮಾಡುತ್ತೇನೆ ಎಂದು ಹೇಳಿದ್ದರು. ಬಾಬಾನನ್ನು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಕೋರ್ಟ್ ಘೋಷಿಸಿದ ನಂತರ ಮೋದಿ ಈತನನ್ನು ಹೊಗಳಿದ್ದ ಸಂದೇಶಗಳು ಟ್ವೀಟರ್‍ನಲ್ಲಿ ಬಿತ್ತರವಾಗುತ್ತಿದೆ.

Facebook Comments

Sri Raghav

Admin