ಅವ್ಯವಹಾರ : ವಿವಾದಿತ ಮಾಂಸ ರಪ್ತುದಾರ ಮೊಯಿನ್ ಖುರೇಷಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Moin-Qureshi

ನವದೆಹಲಿ, ಆ.26-ಹಣಕಾಸು ಅಕ್ರಮ ಮತ್ತು ಅವ್ಯವಹಾರಗಳ ಪ್ರಕರಣದ ಸಂಬಂಧ ವಿವಾದಿತ ಮಾಂಸ ರಪ್ತುದಾರ ಮೊಯಿನ್ ಖುರೇಷಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ವಿಚಾರಣೆ ನಡೆಸಿದ ನಂತರ ನಿನ್ನೆ ತಡ ರಾತ್ರಿ ಖುರೇಷಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾಳಧನ ಹಾಗೂ ಅಕ್ರಮ ವಹಿವಾಟು ಆರೋಪದ ಮೇಲೆ ಖುರೇಷಿ ವಿರುದ್ಧ 2015ರಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಂಎಲ್‍ಎ (ಹಣಕಾಸು ದುವ್ರ್ಯವಹಾರ ನಿಯಂತ್ರಣ ಕಾಯ್ದೆ) ಅಡಿ ಉದ್ಯಮಿಯನ್ನು ಬಂಧಿಸಲಾಗಿದೆ. ಇಡಿ ಸಲ್ಲಿಸಿರುವ ಹೊಸ ಎಫ್‍ಐಆರ್‍ನಲ್ಲಿ ಸಿಬಿಐ ಮಾಜಿ ನಿರ್ದೇಶಕ ಎ.ಪಿ.ಸಿಂಣ್ ಹೆಸರನ್ನು ಸೇರಿಸಲಾಗಿದೆ.

 

Facebook Comments

Sri Raghav

Admin