ಆ.28ರಂದು ಡಾಲರ್ಸ್ ಕಾಲೊನಿಯ ಯಡಿಯೂರಪ್ಪ ನಿವಾಸದಲ್ಲಿ ದಲಿತರಿಗೆ ಭೋಜನಕೂಟ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-Dollers-01

ಬೆಂಗಳೂರು, ಆ.26- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಆ.28ರಂದು ಇಲ್ಲಿಯ ಡಾಲರ್ಸ್ ಕಾಲೊನಿಯ ತಮ್ಮ ನಿವಾಸಕ್ಕೆ ದಲಿತರನ್ನು ಭೋಜನಕ್ಕೆ ಆಹ್ವಾನಿಸಿದ್ದಾರೆ. ಬಿಜೆಪಿ ಜನಸಂಪರ್ಕ ಅಭಿಯಾನ ವೇಳೆ ರಾಜ್ಯದ ನಾನಾ ಭಾಗದಲ್ಲಿರುವ ದಲಿತರ ಮನೆಗೆ ಭೇಟಿ ನೀಡಿ ಊಟ ಸೇವಿಸಿದ್ದರು.
ಬಿಜೆಪಿ ನಡಿಗೆ ದಲಿತರ ಮನೆಗೆ ಎಂಬ ಜನ ಸಂಪರ್ಕ ಅಭಿಯಾನ ನಡೆಸಿದ್ದ ಮಾಜಿ ಸಿಎಂ ಯಡಿಯೂರಪ್ಪ ದಲಿತ ಕುಟುಂಬಗಳಿಗೆ ತಮ್ಮ ಮನೆಗೆ ಆಹ್ವಾನ ನೀಡಿದ್ದಾರೆ. ಜನ ಸಂಪರ್ಕ ಅಭಿಯಾನದ ಸಂದರ್ಭ ತಮಗೆ ಸತ್ಕರಿಸಿದ್ದ 33 ಕುಟುಂಬಗಳನ್ನು, ಆಗಸ್ಟ್ 28ಕ್ಕೆ 33 ದಲಿತ ಕುಟುಂಬಗಳನ್ನು ಡಾಲರ್ಸ್ ಕಾಲೋನಿಯ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದು, ವಿಶಿಷ್ಟ ಸತ್ಕಾರ ಕುಡ ನಡೆಯಲಿದೆ. ವಿಶಿಷ್ಟ ಅಡುಗೆ ತಯಾರಿಸಿ ದಲಿತರ ಜೊತೆಯೇ ಯಡಿಯೂರಪ್ಪ ಊಟ ಮಾಡುವ ಸಾಧ್ಯತೆ ಇದೆ.

ಇದೀಗ ಅದಕ್ಕೆ ಪೂರಕವಾಗಿ ದಲಿತರನ್ನು ತಮ್ಮ ಮನೆಗೆ ಆಹ್ವಾನಿಸಿದ್ದಾರೆ. ಇವರಿಗಾಗಿ ಆ.28ರಂದು ವಿಶೇಷ ಭೋಜನ ವ್ಯವಸ್ಥೆಯ ಸಿದ್ಧತೆ ಮಾಡಿಕೊಳ್ಳಲು ಬಿಎಸ್‍ವೈ ಸೂಚಿಸಿದ್ದಾರೆ.ದಲಿತರ ಮನೆಗೆ ಭೇಟಿ ಕೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನಡೆಯನ್ನು ಲೇವಡಿ ಮಾಡಿದ್ದ ರಾಜ್ಯ ಸರ್ಕಾರ, ದಲಿತರ ಮನೆಗೆ ನೀವು ಹೋಗುವ ಜತೆ ಅವರನ್ನೂ ನಿಮ್ಮ ಮನೆಗೆ ಕರೆಸಿಕೊಳ್ಳಿ. ನಿಮ್ಮ ಗಂಡು ಮಕ್ಕಳಿಗೆ ದಲಿತರ ಮನೆಯ ಹೆಣ್ಣು ಮಕ್ಕಳನ್ನು ತಂದುಕೊಳ್ಳಿ ಎಂದು ಸಿಎಂ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದರು. ಇದೀಗ ಇದಕ್ಕೆ ಪ್ರತ್ಯುತ್ತರವಾಗಿ ಬಿಎಸ್‍ವೈ ದಲಿತರನ್ನು ಊಟಕ್ಕೆ ಆಹ್ವಾನಿಸಿದ್ದಾರೆ.

ಜನಸಂಪರ್ಕ ಸಭೆ ಸಂದರ್ಭ ಹೋಟೆಲ್‍ನಿಂದ ತರಿಸಿದ ಆಹಾರವನ್ನು ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಸೇವಿಸಿ ಬರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರ ಮಧ್ಯೆ, ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಲು ಯಡಿಯೂರಪ್ಪ ಈ ಔತಣ ಕೂಟ ಆಯೋಜಿಸಿದ್ದಾರೆ ಎನ್ನಲಾಗಿದೆ.

Facebook Comments

Sri Raghav

Admin