ಚಿಕ್ಕೋಡಿ ಉಪ ಬಂದೀಖಾನೆಯಲ್ಲಿ ಗೋಡೆಗೆ ಕೊರೆದು ಮೂವರು ಖೈದಿಗಳು ಎಸ್ಕೇಪ್

ಈ ಸುದ್ದಿಯನ್ನು ಶೇರ್ ಮಾಡಿ

Prison-Jail-Breake

ಚಿಕ್ಕೋಡಿ,ಆ.26-ಕಾರಾಗೃಹದ ಗೋಡೆಗೇ ಕನ್ನ ಹಾಕಿ ಮೂವರು ವಿಚಾರಣಾಧೀನ ಖೈದಿಗಳು ಪರಾರಿಯಾಗಿರುವ ಘಟನೆ ಇಲ್ಲಿನ ಉಪ ಬಂದೀಖಾನೆಯಲ್ಲಿ ನಡೆದಿದೆ. ಮಹಾರಾಷ್ಟ್ರ ಮೂಲದ ಶರತ್‍ಪವರ್, ನಿತೀನ್ ಜಾಧವ್, ಅಶೋಕ್ ಬೋಸಲೆ ಜೈಲಿನ ಹಿಂಬಾದಿ ಗೋಡೆಯ ಕಲ್ಲುಗಳನ್ನು ಕಿತ್ತುಹಾಕಿ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.  ಈ ಮೂವರು ದರೋಡೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ವಿಚಾರಣಾಧೀನ ಖೈದಿಗಳಾಗಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪ ಬಂದೀಖಾನೆಯಲ್ಲಿದ್ದರು. ರಾತ್ರಿ ಗೋಡೆಯ ಕಲ್ಲುಗಳನ್ನು ಕಿತ್ತು ಕನ್ನ ಹಾಕಿ ಈ ಮೂವರು ಇಂದು ಬೆಳಗ್ಗಿನ ಜಾವ ಎಸ್ಕೇಪ್ ಆಗಿದ್ದಾರೆ.

ಶೇಷವೆನಂದರೆ ಈ ಜೈಲು ಚಿಕ್ಕೋಡಿ ಪಟ್ಟಣದ ಜನನಿಬಿಡ ಸ್ಥಳದಲ್ಲಿ ಇದೆ.ಕಳೆದ ಮೂರು ದಿನಗಳ ಹಿಂದೆಯೂ ಮೂವರು ಖೈದಿಗಳು ಇದೇ ರೀತಿ ತಪ್ಪಿಸಿಕೊಂಡಿದ್ದರು|

Facebook Comments

Sri Raghav

Admin