ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ, ಮೂವರು ಯೋಧರು ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

3-Killed-Firinbg--01

ಶ್ರೀನಗರ, ಆ.26-ಕಾಶ್ಮೀರ ಕಣಿವೆಯಲ್ಲಿ ಮತ್ತು ಮುಂದುವರಿದ ಉಗ್ರರ ಅಟ್ಟಹಾಸಕ್ಕೆ ಇಬ್ಬರು ಯೋಧರು ಹುತಾತ್ಮರಾಗಿ, ಸಿಆರ್‍ಪಿಎಫ್‍ನ ಇತರ ಆರು ಸೈನಿಕರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ನಡೆದಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಪೊಲೀಸ್ ಕಟ್ಟಡವೊಂದರ ಮೇಲೆ 4.30ರ ನಸುಕಿನಲ್ಲಿ ಭಯೋತ್ಪಾದಕರು ದಾಳಿ ನಡೆಸಿ ಮನಸೋಇಚ್ಚೆ ಗುಂಡು ಹಾರಿಸಿದರು. ಈ ಆಕ್ರಮಣದಲ್ಲಿ ಪೊಲೀಸ್, ಇಬ್ಬರು ಸೈನಿಕರು ಹುತಾತ್ಮರಾಗಿ, ಮೃತಪಟ್ಟು ಆರು ಮಂದಿ ಸೈನಿಕರು ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಯೋತ್ಪಾದಕರ ದಾಳಿಗೆ ಪ್ರತಿಯಾಗಿ ಭದ್ರತಾಪಡೆ ಯೋಧರೂ ಗುಂಡು ಹಾರಿಸಿದರು. ಆ ಪ್ರದೇಶವನ್ನು ಹೆಚ್ಚುವರಿ ಪಡೆಗಳು ಸುತ್ತುವರಿದಿವೆ.

Facebook Comments

Sri Raghav

Admin