ಗ್ಯಾಂಗ್‍ವಾರ್‍ ತಡೆಯಲು ಹೋದ ಪಿಎಸ್‍ಐ ಮೇಲೆ ಮಚ್ಚು ಬೀಸಿದ ರೌಡಿಗಳು

ಈ ಸುದ್ದಿಯನ್ನು ಶೇರ್ ಮಾಡಿ

PSI-Crime--01

ಬೆಂಗಳೂರು, ಆ.26-ನಡುರಸ್ತೆಯಲ್ಲೇ ನಡೆಯುತ್ತಿದ್ದ ಗ್ಯಾಂಗ್‍ವಾರ್‍ನ್ನು ತಡೆಯಲು ಹೋದ ಪಿಎಸ್‍ಐ ಮೇಲೆ ರೌಡಿಗಳು ಮಚ್ಚು ಬೀಸಿರುವ ಘಟನೆ ನಗರದಲ್ಲಿ ನಡೆದಿದೆ. ಡಿ.ಜೆ.ಹಳ್ಳಿಯ ಸಬ್‍ಇನ್ಸ್‍ಪೆಕ್ಟರ್ ನಯಾಜ್ ರೌಡಿಗಳ ಗ್ಯಾಂಗ್‍ವಾರ್‍ನಲ್ಲಿ ಸಿಲುಕಿ ಗಾಯಗೊಂಡಿದ್ದಾರೆ. ಆ.24ರಂದು ಸಂಜೆ 6 ಗಂಟೆಗೆ ಡಿ.ಜೆ.ಹಳ್ಳಿಯ ಶ್ಯಾಂಪುರ ರಸ್ತೆಯಲ್ಲಿ ರೌಡಿ ನದೀಮ್ ಮತ್ತವರ ಸಹಚರರು ಉಮರ್‍ನನ್ನು ಹತ್ಯೆ ಮಾಡಲು ಮಾರಕಾಸ್ತ್ರಗಳನ್ನಿಡಿದು ಬೆನ್ನಟ್ಟಿದರು. ಸುದ್ದಿ ತಿಳಿದು ತಕ್ಷಣಕ್ಕೆ ಸ್ಥಳಕ್ಕೆ ಬಂದ ಪಿಎಸ್‍ಐ ನಯಾಜ್ ಮತ್ತು ಸಿಬ್ಬಂದಿ ಈ ಹತ್ಯೆ ತಡೆಯಲು ನದೀಮ್ ಗ್ಯಾಂಗ್‍ನ ಬೆನ್ನಹತ್ತಿದರು. ಈ ಸಂದರ್ಭದಲ್ಲಿ ತಿರುಗಿಬಿದ್ದ ನದೀಮ್ ಹಾಗೂ ಆತನ ಸಹಚರರು ಪಿಎಸ್‍ಐ ನಯಾಜ್ ಮೇಲೆ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಇತರ ಪೊಲೀಸ್ ಸಿಬ್ಬಂದಿ ನೆರವಿಗೆ ಬಂದಿದ್ದರಿಂದ ನದೀಮ್ ಗ್ಯಾಂಗ್ ಪರಾರಿಯಾಗಿದೆ.

ಸಂಜೆ ವೇಳೆಯಲ್ಲಿ ಸಿನಿಮೀಯ ರೀತಿಯಲ್ಲಿ ರೌಡಿಗಳು ಮಾರಕಾಸ್ತ್ರಗಳನ್ನಿಡಿದು ಬಡಿದಾಟಕ್ಕೆ ಮುಂದಾಗಿದ್ದಾರೆ. ಉಮರ್‍ನನ್ನು ನದೀಮ್ ಹಾಗೂ ನಾಲ್ಕೈದು ಮಂದಿ ಸಹಚರರು ಬೆನ್ನ ಅಟ್ಟುತ್ತಿರುವುದು ಸಿನಿಮೀಯ ಶೈಲಿಯಲ್ಲಿದ್ದು ಸಿಸಿ ಟಿವಿಯಲ್ಲಿ ದಾಖಲಾಗಿದೆ. ಪೆÇಲೀಸರು ಮಧ್ಯಪ್ರವೇಶಿಸಿದ್ದರಿಂದ ಉಮರ್‍ನ ಹತ್ಯೆ ತಪ್ಪಿದೆ. ರೌಡಿಗಳ ಪ್ರತಿ ದಾಳಿಯಿಂದ ಗಾಯಗೊಂಡಿರುವ ನಯಾಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

Facebook Comments

Sri Raghav

Admin