ಟೆಕ್ಸಾಸ್‍ನಲ್ಲಿ ಹಾರ್ವೆ ಚಂಡಮಾರುತದ ರೌದ್ರಾವತಾರ

ಈ ಸುದ್ದಿಯನ್ನು ಶೇರ್ ಮಾಡಿ

Txas

ಹೌಸ್ಟನ್, ಆ.26-ಕಳೆದ 12 ವರ್ಷಗಳಲ್ಲಿ ಕಂಡು ಕೇಳರಿಯದ ಅತ್ಯಂತ ಪ್ರಬಲ ಹಾರ್ವೆ ಚಂಡಮಾರುತ ಅಮೆರಿಕದ ಟೆಕ್ಸಾಸ್ ಕರಾವಳಿ ಪ್ರದೇಶದ ಮೇಲೆ ಇಂದು ಅಪ್ಪಳಿಸಿದೆ. ಈ ಪ್ರಾಂತ್ಯದಲ್ಲಿ ಗಂಟೆಗೆ 195 ಕಿ.ಮೀ. ವೇಗ ಬಿರುಗಾಳಿಯೊಂದಿಗೆ ಭಾರೀ ಮಳೆಯಾಗುತ್ತಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮನೆಗಳ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.  ಚಂಡಮಾರುತದ ಅಬ್ಬರಕ್ಕೆ ದೇಶದ ಬೃಹತ್ ತೈಲ ಶುದ್ಧೀಕರಣ ಮತ್ತು ಪೆಟ್ರೋಕೆಮಿಕಲ್ ಘಟಕಗಳಿಗೆ ಹಾನಿಯಾಗಿದ್ದು, ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ. ಈ ಪ್ರದೇಶದಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಭಾರೀ ಮಳೆಯಾಗಲಿದ್ದು, ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಪರಿಸ್ಥಿತಿಯನ್ನು ಎದುರಿಸಲು ಸೇನಾಪಡೆ ಸಮರೋಪಾದಿಯ ಸಿದ್ದತೆ ನಡೆಸುತ್ತಿದೆ.

Texas--06

Facebook Comments

Sri Raghav

Admin