ತಾಜ್‍ಮಹಲ್ ದೇವಾಲಯವಲ್ಲ, ಸಮಾಧಿ

ಈ ಸುದ್ದಿಯನ್ನು ಶೇರ್ ಮಾಡಿ

Taj-Mahal--014

ಆಗ್ರಾ, ಆ.26-ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್‍ಮಹಲ್ ಒಂದು ಸಮಾಧಿ ವಿನಃ ಅದು ದೇವಾಲಯವಲ್ಲ ಎಂದು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ನ್ಯಾಯಾಲಯಕ್ಕೆ ತಿಳಿಸಿದೆ. ತಾಜ್‍ಮಹಲ್ ವಾಸ್ತವವಾಗಿ ತೇಜೋಮಹಾಲಯ ಎಂಬ ದೇವಸ್ಥಾನ ಎಂದು ವಾದಿಸಿ ಆರು ವಕೀಲರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯುತ್ತಿರುವ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಇಲಾಖೆ ಈ ಸಂಬಂಧ ಲಿಖಿತ ಹೇಳಿಕೆ ನೀಡಿದೆ. ಈ ಹಿಂದೆ ಇಲ್ಲಿದ್ದ ಶಿವನ ದೇವಸ್ಥಾನವನ್ನು ಧ್ವಂಸಗೊಳಿಸಿ ಅಲ್ಲಿ ತಾಜ್‍ಮಹಲ್ ನಿರ್ಮಿಸಲಾಗಿದೆ ಎಂಬ ವಾದವನ್ನು ಇಲಾಖೆ ನಿರಾಕರಿಸಿದೆ. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಸೆಪ್ಟೆಂಬರ್ 11ಕ್ಕೆ ಮುಂದೂಡಿದೆ.

Facebook Comments

Sri Raghav

Admin