ದಲಿತರನ್ನು ಊಟಕ್ಕೆ ಕರೆದು ಬಿಎಸ್‍ವೈ ದೊಡ್ಡ ಸಾಧನೆ ಮಾಡಿದ್ದಾರೆ : ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Parameshwar Yadiyurappa

ಬೆಂಗಳೂರು, ಆ.26-ದಲಿತರನ್ನು ಊಟಕ್ಕೆ ಕರೆಯುವ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ದೊಡ್ಡ ಸಾಧನೆ ಮಾಡಿದ್ದಾರೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಾ.ಜಿ.ಪರಮೇಶ್ವರ್ ಲೇವಡಿ ಮಾಡಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರದಲ್ಲಿದ್ದಾಗ ದಲಿತರನ್ನು ಕರೆಯಲಿಲ್ಲ. ಈಗ ಕರೆಯುತ್ತಿದ್ದಾರೆ. ದಲಿತರನ್ನು ಮನೆಗೆ ಕರೆದು ಹೊಟೇಲ್‍ನಲ್ಲಿ ಊಟ ಹಾಕಿಸುತ್ತಾರೇನೋ ಎಂಬುದನ್ನು ಕಾದುನೋಡಬೇಕಿದೆ. ಈ ಬೆಳವಣಿಗೆಯಿಂದ ಕಾಂಗ್ರೆಸ್‍ಗೆ ಯಾವುದೇ ಲಾಭ, ನಷ್ಟವಾಗವುದಿಲ್ಲ. ಬಿಜೆಪಿಗೆ ಲಾಭವಾಗಬಹುದೇನೋ ಗೊತ್ತಿಲ್ಲ ಎಂದು ಹೇಳಿದರು.

ಪಂಜಾಬ್-ಹರ್ಯಾಣದಲ್ಲಿ ರಾಮ್‍ರಹೀಮ್ ಬೆಂಬಲಿಗರ ಗಲಭೆ ಕುರಿತು ಪ್ರತಿಕ್ರಿಯೆ ನೀಡಿದ ಪರಮೇಶ್ವರ್ ಅವರು, ಅಲ್ಲಿನ ರಾಜ್ಯಸರ್ಕಾರಗಳು ಕಾನೂನು ಸುವ್ಯವಸ್ಥೆ ಪಾಲಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್‍ಸಿಗ್ನಲ್ ಕೊಟ್ಟಿದೆ. ಸಿಎಂ ದಿನಾಂಕ ನಿಗದಿ ಮಾಡಿ ಹೊಸ ಸಚಿವರಿಗೆ ಪ್ರಮಾಣ ವಚನ ಬೋಧಿಸುವುದು ಮಾತ್ರ ಬಾಕಿ ಇದೆ ಎಂದರು. ಪರಿಶಿಷ್ಟ ಜಾತಿಯಲ್ಲಿನ ಎಡ-ಬಲ ಪೈಪೋಟಿ ಸಂಪುಟ ವಿಸ್ತರಣೆಗೆ ಅಡ್ಡಿಯಾಗಿದೆ ಎಂಬ ಆರೋಪವನ್ನು ಪರಮೇಶ್ವರ್ ಅಲ್ಲಗಳೆದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್ ಅವರು, ಬಿಜೆಪಿಯವರಿಗೆ ರಾಜ್ಯಸರ್ಕಾರ ಮತ್ತು ಕಾಂಗ್ರೆಸ್‍ನ್ನು ಟೀಕಿಸಲು ವಿಷಯಗಳಿಲ್ಲ. ಹೀಗಾಗಿ ಸಿಫೋರ್ ಸಮೀಕ್ಷೆಯನ್ನು ಮುಂದಿಟ್ಟುಕೊಂಡು ಟೀಕೆ ಮಾಡುತ್ತಿವೆ ಎಂದು ಆರೋಪಿಸಿದರು.ಚುನಾವಣೆಯನ್ನು ಎದುರಿಸಲು ಬಿಜೆಪಿ ಯಾವ ಅಜೆಂಡಾಗಳು ಇಲ್ಲ. ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಒಂದು ಸುತ್ತು ಕರ್ನಾಟಕಕ್ಕೆ ಬಂದು ಹೋಗಿದ್ದಾರೆ. ಇಂದು ನರೇಂದ್ರ ಮೋದಿ ಬರುವುದು ಮಾತ್ರ ಬಾಕಿ ಇದೆ. ಯಾರೇ ಬಂದರೂ ಕಾಂಗ್ರೆಸ್ಸನ್ನು ಸೋಲಿಸಲು ಸಾಧ್ಯವಿಲ್ಲ. ಸಿಫೋರ್ ಸಮೀಕ್ಷೆ ನಿಜವಾಗಲಿದೆ. ಕಳೆದ 14 ವರ್ಷದಿಂದ ಸಮೀಕ್ಷೆ ನಡೆಸುತ್ತಿರುವ ಸಂಸ್ಥೆ ಈವರೆಗೂ ನೀಡಿರುವ ಎಲ್ಲಾ ವರದಿಗಳು ಕರಾರುವಕ್ಕಾಗಿವೆ ಎಂದರು.

Facebook Comments

Sri Raghav

Admin