ದೇರಾ ಬೆಂಬಲಿಗರ ಹಿಂಸಾಚಾರ : 32 ಸಾವು, 300 ಮಂದಿಗೆ ಗಾಯ, 550 ಜನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Dera--012

ಸಿರ್ಸಾ (ಹರ್ಯಾಣ), ಆ.26-ಅತ್ಯಾಚಾರ ಪ್ರಕರಣದಲ್ಲಿ ವಿವಾದಾತ್ಮಕ ಸ್ವಯಂಘೋಷಿತ ದೇವಮಾನವ ಗುರ್‍ಮೀತ್ ರಾಮ್ ರಹೀಂ ಸಿಂಗ್ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ ಬಳಿಕ ಹರ್ಯಾಣ ಪಂಚಕುಲಾ ಸೇರಿದಂತೆ ವಿವಿಧೆಡೆ ಭುಗಿಲೆದ್ದ ಹಿಂಸಾಚಾರಕ್ಕೆ 32ಜನ ಬಲಿಯಾಗಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಶೋಚನೀಯವಾಗಿದೆ. ಈ ಮಧ್ಯೆ ದೆಹಲಿ, ಮತ್ತು ಉತ್ತರಪ್ರದೇಶಗಳೂ ಉದ್ವಿಗ್ನಗೊಂಡಿದ್ದು ಹಿಂಸಾಚಾರ ಉಲ್ಬಣಗೊಂಡಿದೆ. ದುಷ್ಕರ್ಮಿಗಳು ದೆಹಲಿಯ ಆನಂದ್ ವಿಹಾರ ರೈಲ್ವೆ ನಿಲ್ದಾಣ ಸೇರಿದಂತೆ ಕೆಲವೆಡೆ ದಾಂಧಲೆ ನಡೆಸಿ ಅಗ್ನಿ ಸ್ಪರ್ಶ ಮಾಡಿದ್ದಾರೆ.

DIIHykYVYAMcm0Z

ಹರ್ಯಾಣ ಮತ್ತು ಪಂಜಾಬ್‍ನಲ್ಲಿ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಪಟ್ಟಂತೆ 550ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹರ್ಯಾಣ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಬಿ.ಎಸ್.ಸಂಧು ತಿಳಿಸಿದ್ದಾರೆ.  ಪರಿಸ್ಥಿತಿ ಈಗ ಸಂಪೂರ್ಣ ಹತೋಟಿಯಲ್ಲಿದ್ದು, ಕಫ್ರ್ಯೂ ಮುಂದುವರಿಸಲಾಗಿದೆ. ಸೇನೆಯ ಎರಡು ಮತ್ತು ಅರೆಸೇನಾ ಪಡೆಯ 10 ತುಕಡಿಗಳನ್ನು ಬಂದೋಬಸ್ತ ಗಾಗಿ ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

DIIQW2QV0AAs-wR

ಡೇರಾ ಬೆಂಬಲಿಗರು ಹಿಂಸಾಚಾರ, ವಾಹನಗಳಿಗೆ ಅಗ್ನಿಸ್ಪರ್ಶ ಮಾಡಿ ಪೊಲೀಸರೊಂದಿಗೆ ಘರ್ಷಣೆಗೆ ಇಳಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಪ್ಪಿಸಿಲು ಲಾಠಿ ಪ್ರಹಾರ, ಆಶ್ರುವಾಯು, ಜಲಫಿರಂಗಿ ಮತ್ತು ಗೋಲಿಬಾರ್ ನಡೆಸುವುದು ಅನಿವಾರ್ಯವಾಯಿತು ಎಂದು ಡಿಜಿಪಿ ಸ್ಪಷ್ಟಪಡಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಫರೀದ್‍ಕೋಟ್, ಮಾಲೌಟ್, ಬರ್ನಾಲಾ, ಭಟಿಂಡಾ, ಮಾನ್ಹಾ, ಫಿರೋಜ್‍ಪುರ್ ಸೇರಿದಂತೆ 12 ಜಿಲ್ಲೆಗಳಲ್ಲಿ ಕಫ್ರ್ಯೂ ವಿಧಿಸಲಾಗಿದೆ. ಹಿಂಸಾಚಾರದಿಂದ ಕೆಲವು ವಾರ್ತಾ ವಾಹಿನಿಗಳ ಓಬಿ (ಔಟ್‍ಡೋರ್ ಬ್ರಾಡ್‍ಕಾಸ್ಟಿಂಗ್ ಅಥವಾ ಹೊರಾಂಗಣ ನೇರ ಪ್ರಸಾರ) ವ್ಯಾನ್‍ಗಳೂ ಸೇರಿದಂತೆ ಅನೇಕ ವಾಹನಗಳು ಡೇರಾ ಬೆಂಬಲಿಗರ ಆಕ್ರೋಶಕ್ಕೆ ತುತ್ತಾಗಿವೆ.

DIIPAkdWAAAYvob

ಬಂಧನಕ್ಕೊಳಗಾಗಿರುವ ವಿವಾದಿತ ರಾಮ್ ರಹೀಂ ಸಿಂಗ್‍ನನ್ನು ರೋಹ್ಟಕ್ ಸುನಾರಿಯಾ ಜೈಲಿನಲ್ಲಿ ಇಡಲಾಗಿದೆ. ಕಾರಾಗೃಹದ ಸುತ್ತಲೂ 1 ಕಿ.ಮೀ. ವ್ಯಾಪ್ತಿಯಲ್ಲಿ ಕೇಂದ್ರೀಯ ಕೈಗಾರಿಕ ಭದ್ರತಾ ಪಡೆ ಯೋಧರನ್ನು ನಿಯೋಜಿಸಲಾಗಿದೆ.  ಶಾಂತಿ ಕಾಪಾಡುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್, ಹರ್ಯಾಣ ಮುಖ್ಯಮಂತ್ರಿ ಮನೋಹರ್ ಖಟ್ಟರ್ ಮತ್ತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮನವಿ ಮಾಡಿದ್ದಾರೆ. ಉಭಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ರಾಜನಾಥ್‍ಸಿಂಗ್ ಮಾತುಕತೆ ನಡೆಸಿ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಮಾಹಿತಿ ಪಡೆದಿದ್ದಾರೆ.

DIIOzXzV0AIHqI8

ದೆಹಲಿ, ಉತ್ತರಪ್ರದೇಶಕ್ಕೂ ವ್ಯಾಪಿಸಿದ ಹಿಂಸಾಚಾರ :

ಹರ್ಯಾಣ ಮತ್ತು ಪಂಜಾಬ್‍ನಲ್ಲಿ ಭುಗಿಲೆದ್ದ ಹಿಂಸಾಚಾರ ದೆಹಲಿ ಮತ್ತು ಉತ್ತರಪ್ರದೇಶಗಳಿಗೂ ವ್ಯಾಪಿಸಿದ್ದು, ಗಲಭೆಗಳು ನಡೆದ ವರದಿಗಳಾಗಿವೆ. ಆನಂದ್‍ವಿಹಾರ ರೈಲ್ವೆ ನಿಲ್ದಾಣಕ್ಕೆ ಡೇರಾ ಹಿಂಬಾಲಕರು ಬೆಂಕಿ ಹಚ್ಚಿದ್ದಾರೆ. ಉತ್ತರಪ್ರದೇಶದ ಕೆಲವೆಡೆ ದುಷ್ಕರ್ಮಿಗಳು ದಾಂಧಲೆ ನಡೆಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಶಾಂತಿ ಕಾಪಾಡುವಂತೆ ದೆಹಲಿ ಮುಖ್ಯಮಂತ್ತಿ ಅರವಿಂದ್ ಕೇಜ್ರಿವಾಲ್ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜನತೆಯಲ್ಲಿ ಮನವಿ ಮಾಡಿದ್ದಾರೆ.

DIIOaXwUwAEg1m9

ಸಿಬಿಐ ವಿಶೇಷ ನ್ಯಾಯಾಲಯದ ಜೈದೀಪ್ ಸಿಂಗ್, ರಾಮ್ ರಹೀಂ ಸಿಂಗ್‍ರನ್ನು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ನಿನ್ನೆ ತೀರ್ಪು ನೀಡಿ ಆ.28ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ಹೇಳಿದ್ದರು. ಅನಾಮಧೇಯ ಪತ್ರಗಳು ವ್ಯಾಪಕವಾಗಿ ಬಂದ ಹಿನ್ನೆಲೆಯಲ್ಲಿ ಡೇರಾ ಮುಖ್ಯಸ್ಥನ ವಿರುದ್ಧ 2002ರಲ್ಲಿ ಲೈಂಗಿಕ ಶೋಷಣೆ ಪ್ರಕರಣ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಸೂಚನೆ ನೀಡಿತ್ತು. ಸಿಂಗ್ ಇಬ್ಬರು ಸಾಧ್ವಿಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪ ಹೊರಿಸಲಾಗಿತ್ತು. ಈ ಆರೋಪಗಳನ್ನು ಅವರು ನಿರಾಕರಿಸಿದ್ದರು. ಪತ್ರಕರ್ತ ರಾಮಚಂದ್ರ ಛತ್ರಪತಿ ಹತ್ಯೆ ಪ್ರಕರಣದಲ್ಲೂ ದೇರಾ ಮುಖ್ಯಸ್ಥ ವಿಚಾರಣೆ ಎದುರಿಸುತ್ತಿದ್ದಾನೆ.

DIII2JzUQAAmEm8

DIIHykYVYAMcm0Z

Facebook Comments

Sri Raghav

Admin