ಪಾಕ್ ವಿರುದ್ಧ ಕಠಿಣ ಕ್ರಮಕ್ಕೆ ಟ್ರಂಪ್ ಹಿಂದೇಟು ಹಾಕುವುದಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Trump--01

ವಾಷಿಂಗ್ಟನ್, ಆ.26-ಭಯೋತ್ಪಾದನೆ ಗುಂಪುಗಳನ್ನು ಸೆಬಡಿಯಲು ಪಾಕಿಸ್ತಾನಿ ನಾಯಕರು ಆಸಕ್ತಿ ವಹಿಸುವಂತೆ ಮಾಡಲು ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಹಿಂದೆ ಮುಂದೆ ನೋಡುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.  ಪಾಕಿಸ್ತಾನವು ಭಯೋತ್ಪಾದಕರು ಮತ್ತು ಅವರ ಜಾಲಗಳನ್ನು ಹತ್ತಿಕ್ಕುವಂತೆ ಮಾಡಲು ಅಮೆರಿಕ ಯಾವುದೇ ಕ್ರಮಗಳನ್ನು ಬೇಕಾದರೂ ಕೈಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಆ ದೇಶದ ನಾಯಕರ ಮನವೊಲಿಸಲು ಅತ್ಯುಗ್ರ ಕ್ರಮಗಳನ್ನು ಕೈಗೊಳ್ಳದೇ ಟ್ರಂಪ್ ಆಡಳಿತಕ್ಕೆ ಗತ್ಯಂತರವಿಲ್ಲ ಎಂದು ತಮ್ಮ ಹೆಸರನ್ನು ಬಹಿರಂಗೊಳಿಸಲು ಇಚ್ಚಿಸದ ಅಧಿಕಾರಿ ತಿಳಿಸಿದ್ದಾರೆ.

Facebook Comments

Sri Raghav

Admin