ಬೆಂಗಳೂರು- ಮೈಸೂರಿನ ರಾಮ್ ರಹೀಮ್ ಶಾಖಾಮಠಗಳಲ್ಲಿ ನೀರವ ಮೌನ

ಈ ಸುದ್ದಿಯನ್ನು ಶೇರ್ ಮಾಡಿ

Ram-Rahim

ಬೆಂಗಳೂರು, ಆ.26- ಹರಿಯಾಣದ ಡೇರಾ ಸಚ್ಚಾ ಸೌಧ ರಾಮ್ ರಹೀಮ್ ಆಶ್ರಮದ ಶಾಖಾಮಠ ಇರುವ ಬೆಂಗಳೂರು ಮತ್ತು ಮೈಸೂರಿನಲ್ಲಿ ನೀರವ ಮೌನ… ಬೆಂಗಳೂರಿನ ಪೀಣ್ಯ 2ನೆ ಹಂತದಲ್ಲಿರುವ ರಾಮ್-ರಹೀಮ್ ಆಶ್ರಮಕ್ಕೆ ಬೀಗ ಹಾಕಿ ಪೊಲೀಸ್ ಕಾವಲು ಹಾಕಲಾಗಿದೆ. ಇಲ್ಲಿದ್ದ ಆಶ್ರಮದಲ್ಲಿ ಪ್ರತಿ ಭಾನುವಾರ ಹಲವು ಭಕ್ತರು ಸೇರಿಕೊಂಡು ಭಜನೆ ಮಾಡುತ್ತಿದ್ದರು ಎನ್ನಲಾಗಿದೆ. ನಿನ್ನೆ ತೀರ್ಪು ಪ್ರಕಟವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಭಾರೀ ಭಕ್ತರು ಸೇರಿದ್ದರು. ಅವರು ಜೈಲುಪಾಲಾಗುತ್ತಿದ್ದಂತೆ ಆಶ್ರಮದಲ್ಲಿದ್ದ ಭಕ್ತರು ಖಾಲಿಯಾಗಿದ್ದಾರೆ. ಆಶ್ರಮಕ್ಕೆ ಬಿಗಿ ಪೊಲೀಸ್ ಕಾವಲು ಹಾಕಲಾಗಿದೆ. ಅದೇ ರೀತಿ ಮೈಸೂರಿನಲ್ಲಿರುವ ಆಶ್ರಮದಲ್ಲಿ ನಿನ್ನೆ ತೀರ್ಪು ಪ್ರಕಟವಾಗುತ್ತಿದ್ದಂತೆ ಅಲ್ಲಿನ ಭಕ್ತರು ಕಣ್ಣೀರು ಸುರಿಸಿದ್ದಾರೆ.

ಇಲ್ಲಿಗೆ ರಾಮ್-ರಹೀಮ್ ಗುರುಗಳು ಬಂದು ಹೋಗಿದ್ದರು. ಹರಿಯಾಣದಿಂದ ಬಂದು ನೆಲೆಸಿರುವ ಹಲವು ಜನ ಇಲ್ಲಿನ ಮಠದ ಭಕ್ತರಾಗಿದ್ದರು. ವಾರಾಂತ್ಯದಲ್ಲಿ ಬಂದು ಇಲ್ಲಿ ಭಜನೆ ಮತ್ತು ಪೂಜಾ ಕಾರ್ಯಗಳಲ್ಲಿ ತೊಡಗುತ್ತಿದ್ದರು. ನಿನ್ನೆ ತೀರ್ಪು ಹೊರಬರುತ್ತಿದ್ದಂತೆ ಹಲವು ಮಹಿಳೆಯರು ಕಣ್ಣೀರು ಸುರಿಸಿದ್ದಾರೆ.
ನಮ್ಮ ಗುರುಗಳ ಮೇಲೆ ವಿನಾಕಾರಣ ಆರೋಪ ಮಾಡಲಾಗಿದೆ. ಅವರು ಜೈಲಿನಿಂದ ಹೊರಬರುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ.

Facebook Comments

Sri Raghav

Admin