ಯುದ್ಧೋನ್ಮತ್ತ ಉತ್ತರ ಕೊರಿಯಾದಿಂದ ಮತ್ತೆ 3 ಕ್ಷಿಪಣಿಗಳ ಪ್ರಯೋಗ

ಈ ಸುದ್ದಿಯನ್ನು ಶೇರ್ ಮಾಡಿ

3North-Korea--01

ವಾಷಿಂಗ್ಟನ್, ಆ.26 – ಪದೇ ಪದೇ ಅಣ್ವಸ್ತ್ರ ಕ್ಷಿಪಣಿಗಳನ್ನು ಪ್ರಯೋಗಿಸುತ್ತಾ ವಿಶ್ವದಲ್ಲಿ ಆತಂಕ ಸೃಷ್ಟಿಸುತ್ತಿರುವ ಯುದ್ಧೋನ್ಮತ್ತ ಉತ್ತರ ಕೊರಿಯಾ ತನ್ನ ಹಳೆ ಚಾಳಿಯನ್ನೇ ಮುಂದುವರಿಸಿದೆ. ವಿಶ್ವಸಂಸ್ಥೆ ಮತ್ತು ಜಗತ್ತಿನ ಮಹಾಶಕ್ತಿ ಶಾಲಿ ರಾಷ್ಟ್ರಗಳ ಪುನರಾವರ್ತಿತ ಎಚ್ಚರಿಕೆಗಳ ನಡುವೆಯೂ ಪಯೊಂಗ್‍ಯಾಂಗ್ ಇಂದು ಮೂರು ಖಂಡಾಂತರ ಕ್ಷಿಪಣಿಗಳನ್ನು ಕೊರಿಯಾ ದ್ವೀಪಕಲ್ಪದ ಪೂರ್ವ ಸಮುದ್ರದತ್ತ ಉಡಾಯಿಸಿ ಪುನಃ ಭೀತಿಯ ವಾತಾವರಣ ಮೂಡಿಸಿದೆ.

ಉತ್ತರ ಕೊರಿಯಾ ಮೂರು ಕ್ಷಿಪಣಿಗಳ ಪ್ರಯೋಗ ನಡೆಸಿರುವುದನ್ನು ಅಮೆರಿಕ ಮಿಲಿಟರಿ ಮತ್ತು ದಕ್ಷಿಣ ಕೊರಿಯಾದ ಉನ್ನತಾಧಿಕಾರಿಗಳು ಖಚಿತಪಡಿಸಿದ್ದಾರೆ. ಕೊರಿಯಾ ಪರ್ಯಾಯ ದ್ವೀಪದ ಸಮುದ್ರಕ್ಕೆ ಬಿದ್ದ ಉತ್ತರ ಕೊರಿಯಾದ ಮೂರು ಪ್ರೇಕ್ಷೇಪಕ ಕ್ಷಿಪಣಿಯು ಅಲ್ಪ-ಅಂತರದ ಸಾಮಥ್ರ್ಯ ಹೊಂದಿವೆ ಮೊದಲ ಎರಡು ಕ್ಷಿಪಣಿಗಳು ನಿರೀಕ್ಷಿತ ಗುರಿ ತಲುಪುವಲ್ಲಿ ವಿಫಲವಾಗಿದ್ದರೂ, ಮೂರನೇ ಮಿಸೈಲ್ ಕರಾರುವಕ್ಕಾಗಿ ನಿಗದಿ ಸ್ಥಳ ತಲುಪಿ ಸ್ಫೋಟಗೊಂಡಿತು ಎಂದು ಅಮೆರಿಕ ಪೆಸಿಫಿಕ್ ಕಮ್ಯಾಂಡ್ ಹೇಳಿದೆ.

ಈ ಕ್ಷಿಪಣಿಗಳು ದಕ್ಷಿಣ ಕೊರಿಯಾ ಬಳಿ ಇರುವ ಗುವಾಂನ ಅಮೆರಿಕ ಸೇನಾ ನೆಲೆಗೆ ಆತಂಕ ಉಂಟು ಮಾಡಿಲ್ಲ ಎಂದು ನಾರ್ತ್ ಅಮೆರಿಕನ್ ಏರೋಸ್ಪೆಸ್ ಡಿಫೆನ್ಸ್ ಕಮ್ಯಾಂಡ್ ಹೇಳಿದೆ.  ಈ ಹಿಂದೆ ಎರಡು ಅಣ್ವಸ್ತ್ರ ಕ್ಷಿಪಣಿಗಳನ್ನು ಪ್ರಯೋಗಿಸಿ ವಿಶ್ವಸಂಸ್ಥೆಯಿಂದ ಕಠಿಣ ಆರ್ಥಿಕ ದಿಗ್ಬಂಧನಕ್ಕೆ ಒಳಗಾದರೂ, ಉತ್ತರ ಕೊರಿಯಾ ತನ್ನ ಉದ್ದಟತನವನ್ನು ಪ್ರದರ್ಶಿಸುತ್ತಿದೆ.

Facebook Comments

Sri Raghav

Admin