ರಾಮ್‍ರಹೀಮ್ ಸಿಂಗ್ ಬೆಂಬಲಿಗರು, ಅಂಗರಕ್ಷಕರ ವಿರುದ್ಧ ರಾಜದ್ರೋಹ ಪ್ರಕರಣ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

DIIQW2QV0AAs-wR

ಪಂಚಕುಲ, ಆ.26-ಇಬ್ಬರು ಸಾಧ್ವಿಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ದೋಷಿ ಎಂದು ಸಾಬೀತಾದ ನಂತರ ವಿವಾದಿತ ದೇವಮಾನವ ಗುರ್ಮಿತ್ ರಾಮ್‍ರಹೀಮ್ ಸಿಂಗ್ ಬಂಧನಕ್ಕೆ ಅಡ್ಡಿಪಡಿಸಿದ ಎಂಟು ಜನರ ವಿರುದ್ಧ ಪೊಲೀಸರು ರಾಜದ್ರೋಹ ಪ್ರಕರಣ ದಾಖಲಿಸಿದ್ದಾರೆ. ಸಿಬಿಐ ವಿಶೇಷ ನ್ಯಾಯಾಲಯ ಬಾಬಾರನ್ನು ಅಪರಾಧಿ ಎಂದು ಘೋಷಿಸಿದ ನಂತರ ಆತನನ್ನು ಬಂಧಿಸಲು ಪೊಲೀಸರು ಮುಂದಾದಾಗ ಆಶ್ರಮದ ಇಬ್ಬರು ಭಕ್ತರು ಮತ್ತು ಆರು ಮಂದಿ ಅಂಗರಕ್ಷಕರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ದ ರಾಜದ್ರೋಹ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin