ರೇಪಿಸ್ಟ್ ರಾಮ್‍ರಹೀಂ ಸಿಂಗ್‍ಗೆ 1.21 ಕೋಟಿ ರೂ. ಉಡುಗೊರೆ ನೀಡಿದ್ದ ಹರ್ಯಾಣ ಸಚಿವರು..!

ಈ ಸುದ್ದಿಯನ್ನು ಶೇರ್ ಮಾಡಿ

Ram-Rahim-Singh--01

ರೋಹ್ಟಕ್, ಆ.26-ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌಧ (ಡಿಎಸ್‍ಎಸ್) ಮುಖ್ಯಸ್ಥ ಸ್ವಯಂಘೋಷಿತ ದೇವಮಾನವ ಬಾಬಾ ಗುರ್‍ಮೀತ್ ರಾಮ್‍ರಹೀಂ ಸಿಂಗ್‍ಗೆ ಹರ್ಯಾಣ ಸರ್ಕಾರದ ಮೂವರು ಹಿರಿಯ ಸಚಿವರು 1.21 ಕೋಟಿ ರೂ.ಗಳ ಉಡುಗೊರೆ ನೀಡಿದ್ದರು ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ.

ರಾಜ್ಯ ಬಿಜೆಪಿ ಸರ್ಕಾರ ಮತ್ತು ಬಾಬಾ ನಡುವೆ ನಡೆದಿದೆ ಎನ್ನಲಾದ ಕೆಲವು ಗೌಪ್ಯ ವ್ಯವಹಾರಗಳು ಬಹಿರಂಗಗೊಂಡಿವೆ. ಸಚಿವರುಗಳಾದ ರಾಮ್ ವಿಲಾಸ್ ಶರ್ಮ, ಅನಿಲ್ ವಿಜ್ ಮತ್ತು ಮನೀಶ್ ಗ್ರೋವರ್ ಬಾಬಾಗೆ 1.21 ಕೋಟಿ ರೂ.ಗಳ ಮೊತ್ತದ ದುಬಾರಿ ಉಡುಗೊರೆಗಳನ್ನು ಆಗಸ್ಟ್ 15ರಂದು ವಿವಾದಿತ ದೇವಮಾನವನ ಜನ್ಮದಿನದಂದು ನೀಡಿದ್ದರು ಎಂದು ತಿಳಿದುಬಂದಿದೆ.

ಶಿಕ್ಷಣ ಸಚಿವ ರಾಮ್ ವಿಲಾಸ್ ಶರ್ಮ, ಕ್ರೀಡಾ ಉತ್ತೇಜನ ನೆಪದಲ್ಲಿ ಸಚಿವರ ಕೋಟಾದಿಂದ 51 ಲಕ್ಷ ರೂ.ಗಳ ದೇಣಿಗೆ ನೀಡಿದ್ದರು. ಕಳೆದ ವರ್ಷ ಆಗಸ್ಟ್‍ನಲ್ಲಿ ಸಚಿವ ಅನಿಲ್ ವಿಜ್ ಡೇರಾ ಮುಖ್ಯಸ್ಥನಿಗೆ 50 ಲಕ್ಷ ರೂ.ಗಳ ಉದಾರ ವಂತಿಕೆ ನೀಡಿದ್ದರು. ಕೆಲವು ದಿನಗಳ ಹಿಂದಷ್ಟೇ ಸಹಕಾರ ಸಚಿವ ಮನೀಶ್ ಗ್ರೋವರ್ ಸಿಂಗ್ ಖಾತೆಗೆ ಸಚಿವರ ವಿವೇಚನಾ ನಿಧಿಯಿಂದ 11 ಲಕ್ಷ ರೂ.ಗಳನ್ನು ಒದಗಿಸಿದ್ದರು (ಒಟ್ಟು 1.21 ಕೋಟಿ ರೂ.ಗಳು) ಎಂದು ವರದಿಯಾಗಿದೆ.  ಮುಖ್ಯಮಂತ್ರಿ ಮನೋಹರ್ ಖಟ್ಟರ್ ಸಂಪುಟದ ಮಂತ್ರಿ ಮಹೋದಯರು, ಹಿರಿಯ ಧುರೀಣರು, ಶಾಸಕರು ಬಾಬಾನಿಂದ ಆಶೀರ್ವಾದ ಪಡೆಯಲು ಅಗಾಗ ಡೇರಾ ಸಚ್ಚಾ ಸೌಧಕ್ಕೆ ಭೇಟಿ ನೀಡುತ್ತಿದ್ದರು.

Facebook Comments

Sri Raghav

Admin