ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್, ಭಾರತದ ಬಾಕ್ಸರ್‍ಗಳ ಶುಭಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

Boxing--01

ಹ್ಯಾಂಬರ್ಗ್,ಆ.26- ಇಲ್ಲಿ ಆರಂಭಗೊಂಡ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ ಮೊದಲ ಪಂದ್ಯದಲ್ಲಿ ಭಾರತ ಬಾಕ್ಸರ್‍ಗಳು ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಏಷ್ಯ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ ಕಂಚಿನ ಪದಕ ವಿಜೇತ ಅಮಿತ್ ಪಾಂಗಲ್, ಇಟಲಿಯಾ ಫೆಡರೀಗೊ ವಿರುದ್ಧ ರಿಂಗ್‍ನಲ್ಲಿ ಸುಲಭ ಜಯ ಸಾಧಿಸಿ ಎರಡನೇ ಸುತ್ತು ಪ್ರವೇಶಿಸಿದರು. ಎರಡನೇ ಸುತ್ತಿನಲ್ಲಿ ಈಕ್ವಡರ್ ಬಾಕ್ಸರ್ ವಿರುದ್ಧ ಪೈಪೋಟಿ ನೀಡಲಿದ್ದಾರೆ.

ಮತ್ತೊಬ್ಬ ಬಾಕ್ಸರ್ ಗೌರವ್ ಬಿದುರಿ ಕೂಡ ಸುಲಭ ಜಯ ಸಾಧಿಸಿ ಮುಂದಿನ ಸುತ್ತು ಅರ್ಹತೆ ಪಡೆದುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ಟೂರ್ನಿಯಲ್ಲಿ ಆಡಲು ತುಂಬಾ ಖುಷಿಯಾಗಿದೆ. ಎದುರಾಳಿ ಆಟಗಾರ ತುಂಬಾ ಪ್ರಬಲವಾಗಿದ್ದರೂ ಉತ್ತಮ ಶಾಟ್‍ಗಳ ಮೂಲಕ ಗೆಲುವು ಸಾಧಿಸಲಾಯಿತು. ಸತತ ಪರಿಶ್ರಮದಿಂದ ಇಂತಹ ಫಲಿತಾಂಶ ಬರುವುದಕ್ಕೆ ಸಾಧ್ಯವಾಯಿತು ಎಂದು ಹರಿಯಾಣದ 21ವರ್ಷದ ಬಾಕ್ಸರ್ ಅಮಿತ್ ಹೇಳಿದ್ದರು.

Facebook Comments

Sri Raghav

Admin