ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ..?

ಈ ಸುದ್ದಿಯನ್ನು ಶೇರ್ ಮಾಡಿ

Manohar-Lal-Kattar--01

ನವದೆಹಲಿ, ಆ.26- ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಬಾಬಾ ರಾಮ್ ರಹೀಮ್ ಗುರ್ಮಿತ್ ಸಿಂಗ್ ದೋಷಿ ಎಂದು ಪಂಚಕುಲದ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಹರಿಯಾಣದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸಿಎಂ ಮನೋಹರ್ ಲಾಲ್ ಖಟ್ಟರ್ ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ರಾಜೀನಾಮೆ ನೀಡಲಿದ್ದಾರೆಂದು ತಿಳಿದು ಬಂದಿದೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಅವರಿಗೆ ಬಿಜೆಪಿ ವರಿಷ್ಠರು ದಿಲ್ಲಿಗೆ ಬರುವಂತೆ ಸೂಚನೆ ನೀಡಿದ್ದಾರೆ. ಅಪರಾಧಿ ಗುರ್ಮಿತ್ ಸಿಂಗ್ ನನ್ನು ರೋಹ್ಟಕ್‍ನ ಕೇಂದ್ರ ಕಾರಾಗೃಹದಲ್ಲಿರಿಸಲಾಗಿದ್ದು, ಕುರುಕ್ಷೇತ್ರದಲ್ಲಿರುವ ಆತನ ಎರಡು ಆಶ್ರಮಗಳಿಗೆ ಪೊಲೀಸರು ಬೀಗ ಜಡಿದಿದ್ದಾರೆ.

ಅತ್ಯಾಚಾರದ ಪ್ರಕರಣದಲ್ಲಿ ಡೇರಾ ಸಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ದೋಷಿ ಎಂದು ಕೋರ್ಟ್ ತೀರ್ಪು ಹೊರಬಿದ್ದ ನಂತರ ಹರಿಯಾಣ ಸೇರಿದಂತೆ ಹಲವಡೆ ತೀವ್ರ ಹಿಂಸಾಚಾರ ನಡೆದಿದ್ದು, ಈ ಹಿಂಸಾಚಾರವನ್ನು ತಡೆಯಲು ನಮ್ಮ ಸರ್ಕಾರ ವಿಫಲವಾಗಿದೆ ಎಂದು ಸಿಎಂ ಮನೋಹರ್ ಲಾಲ್ ಖಟ್ಟರ್ ಒಪ್ಪಿಕೊಂಡಿದ್ದಾರೆ. ಈ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಖಟ್ಟರ್, ಗುರ್ಮಿತ್ ಬೆಂಬಲಿಗರ ಗಲಭೆಯ ನಿರ್ವಹಣೆಯಲ್ಲಿ ತಮ್ಮ ಸರ್ಕಾರ ಎಡವಿದ್ದನ್ನು ಒಪ್ಪಿಕೊಂಡಿದ್ದಾರೆ. ಗುರ್ಮಿತ್ ಪ್ರಕರಣದ ತೀರ್ಪಿಗೂ ಮುನ್ನ ಹಾಗೂ ತೀರ್ಪಿನ ಬಳಿಕ ನಡೆದ ಬೆಳವಣಿಗೆ ಬಗೆಗಿನ ಉಂಟಾಗಿರುವ ತಮ್ಮ ಲೋಪಗಳನ್ನು ಪತ್ತೆ ಹಚ್ಚುವುದಾಗಿ ಸಿಎಂ ಖಟ್ಟರ್ ತಿಳಿಸಿದ್ದಾರೆ.

ಸರ್ಕಾರದ ವೈಫಲ್ಯ:

ಅತ್ಯಾಚಾರದ ಪ್ರಕರಣದಲ್ಲಿ ಡೇರಾ ಸಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ದೋಷಿ ಎಂದು ಕೋರ್ಟ್ ತೀರ್ಪು ಹೊರಬಿದ್ದ ನಂತರ ಹರಿಯಾಣ ಸೇರಿದಂತೆ ಹಲವಡೆ ತೀವ್ರ ಹಿಂಸಾಚಾರ ನಡೆದಿದ್ದು, ಈ ಹಿಂಸಾಚಾರವನ್ನು ತಡೆಯಲು ನಮ್ಮ ಸರ್ಕಾರ ವಿಫಲವಾಗಿದೆ ಎಂದು ಸಿಎಂ ಮನೋಹರ್ ಲಾಲ್ ಖಟ್ಟರ್ ಒಪ್ಪಿಕೊಂಡಿದ್ದಾರೆ. ಈ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಖಟ್ಟರ್, ಗುರ್ಮಿತ್ ಬೆಂಬಲಿಗರ ಗಲಭೆಯ ನಿರ್ವಹಣೆಯಲ್ಲಿ ತಮ್ಮ ಸರ್ಕಾರ ಎಡವಿದ್ದನ್ನು ಒಪ್ಪಿಕೊಂಡಿದ್ದಾರೆ. ಗುರ್ಮಿತ್ ಪ್ರಕರಣದ ತೀರ್ಪಿಗೂ ಮುನ್ನ ಹಾಗೂ ತೀರ್ಪಿನ ಬಳಿಕ ನಡೆದ ಬೆಳವಣಿಗೆ ಬಗೆಗಿನ ಉಂಟಾಗಿರುವ ತಮ್ಮ ಲೋಪಗಳನ್ನು ಪತ್ತೆ ಹಚ್ಚುವುದಾಗಿ ಸಿಎಂ ಖಟ್ಟರ್ ತಿಳಿಸಿದ್ದಾರೆ.

ನ್ಯಾಯಾಧೀಶರಿಗೆ ಭಿಗಿ ಭದ್ರತೆ:

ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚಾ ಸೌದಾ ಮುಖ್ಯಸ್ಥ ಗುರುಮಿತ್ ರಾಮ್ ರಹೀಮ್ ಸಿಂಗ್ ಅಪರಾಧಿ ಎಂದು ತೀರ್ಪು ನೀಡಿರುವ ನ್ಯಾಯಾಧೀಶ ಜಗ್‍ದೀಪ್ ಸಿಂಗ್ ಸೋಮವಾರ ಶಿಕ್ಷೆ ಪ್ರಮಾಣ ಘೋಷಿಸಬೇಕಿದೆ. ಈ ಮಧ್ಯೆ ಹಿಂಸಾಚಾರ ಭುಗಿಲೆದ್ದಿದ್ದು ಸಾವು-ನೋವು ಸಂಭವಿಸಿವೆ. ಸಾಕಷ್ಟು ಆಸ್ತಿ-ಪಾಸ್ತಿ ನಾಶವಾಗಿದೆ. ಅಂತೆಯೇ ನ್ಯಾಯಾಧೀಶರಿಗೂ ಭದ್ರತೆ ಅಗತ್ಯ ಎನ್ನಲಾಗಿದ್ದು, ಕೇಂದ್ರ ಸರ್ಕಾರ ಸೂಕ್ತ ಭದ್ರತೆ ಒದಗಿಸುವಂತೆ ಹರಿಯಾಣ ಸರ್ಕಾರಕ್ಕೆ ಸೂಚಿಸಿದೆ.

15 ವರ್ಷಗಳ ಹಿಂದಿನ ರೇಪ್ ಕೇಸ್‍ನಲ್ಲಿ ಡೇರಾ ಸಚಾ ಸೌದಾ ಮುಖ್ಯಸ್ಥ ಗುರುಮಿತ್ ರಾಮ್ ರಹೀಮ್ ಸಿಂಗ್ ದೋಷಿ ಎಂದು ಶುಕ್ರವಾರ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಆದರೆ, ರೇಪ್ ಕೇಸ್‍ನಲ್ಲಿ ಗುರುಮಿತ್ ಅಪರಾಧಿ ಎಂದು ಘೋಷಣೆಯಾಗುತ್ತಿದ್ದಂತೆ ಅವರ ಬೆಂಬಲಿಗರು ಹಿಂಸಾಚಾರಕ್ಕೆ ಇಳಿದಿದ್ದಾರೆ. ಹರಿಯಾಣ, ಪಂಜಾಬ್, ದೆಹಲಿ, ಯುಪಿ ಮತ್ತಿತರ ಭಾಗಗಳಲ್ಲಿ ಗಲಭೆ ಎಬ್ಬಿಸಿದ್ದಾರೆ. ಇದರಲ್ಲಿ ಇದುವರೆಗೂ 32 ಮಂದಿ ಸಾವಿಗೀಡಾಗಿದ್ದಾರೆ. 250ಕ್ಕೂ ಮಂದಿ ಗಾಯಗೊಂಡಿದ್ದಾರೆ.

ಇದೀಗ ತೀರ್ಪು ನೀಡಿರುವ ನ್ಯಾಯಾಧೀಶ ಜಗ್‍ದೀಪ್ ಸಿಂಗ್ ಅವರಿಗೂ ಗುರುಮಿತ್ ಬೆಂಬಲಿಗರು ಬೆದರಿಕೆಯೊಡ್ಡುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಕೇಂದ್ರ ಸರ್ಕಾರ ಉನ್ನತ ಮಟ್ಟದ ಭದ್ರತೆ ಒದಗಿಸುವಂತೆ ಹರಿಯಾಣ ಸರ್ಕಾರ ಸೂಚಿಸಿದೆ. ಅಲ್ಲದೆ, ಅಗತ್ಯ ಬಿದ್ದಲ್ಲಿ ಕೇಂದ್ರದ ಭದ್ರತಾ ಪಡೆಗಳಾದ ಸಿಆರ್‍ಪಿಎಫ್ ಅಥವಾ ಸಿಐಎಸ್‍ಎಫ್ ಸಿಬ್ಬಂದಿಯನ್ನೂ ನ್ಯಾ.ಜಗ್‍ದೀಪ್ ಸಿಂಗ್ ಭದ್ರತೆಗೆ ಬಳಸಿಕೊಳ್ಳವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.

ಕಟಕಟೆಯಲ್ಲಿ ಬೆವತ ದೇವಮಾನವ:

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್‍ಗೆ ಸಿಬಿಐ ವಿಶೇಷ ನ್ಯಾಯಾಧೀಶ ಜಗದೀಪ್ ಸಿಂಗ್ ತನ್ನ ವಿರುದ್ಧ ತೀರ್ಪು ಕೇಳಿ ಶಾಕ್ ಆಗಿದ್ದರು ಎಂದು ಸಿಬಿಐನ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್ ಪಿ ಎಸ್ ವರ್ಮಾ ತಿಳಿಸಿದರು. ಕೋರ್ಟ್ ಪ್ರಕ್ರಿಯೆ ನಡೆಯುತ್ತಿದ್ದಾಗ ಗುರ್ಮಿತ್ ಕೈ ಮುಗಿದು ನಮಸ್ಕರಿಸುತ್ತ ಕುಳಿತಿದ್ದ. ಸುಮಾರು ಅರ್ಧ ಗಂಟೆ ಕಾಲ ಕುಳಿತಿದ್ದ ಆತನ ಜತೆಗೆ ಇಬ್ಬರು ಹಿರಿಯ ಸಿಬಿಐ ಅಧಿಕಾರಿಗಳು ಹಾಗೂ ಒಬ್ಬರು ಆರೋಪಿ ಪರ ವಕೀಲರು ಹಾಜರಿದ್ದರು. ತೀರ್ಪು ಪ್ರಕಟವಾದ ಕೂಡಲೇ ಪೊಲೀಸರು ಗುರ್ಮಿತ್ ನನ್ನು ವಶಕ್ಕೆ ಪಡೆದುಕೊಂಡರು.

ನಂತರ ಸಿರ್ಸಾ ದಿಂದ ಪಂಚಕುಲಕ್ಕೆ ಗುರ್ಮಿತ್ ಜೊತೆಗೆ ಬಂದಿದ್ದ ಬೆಂಗಾವಲು ವಾಹನಗಳಿಗೆ ಜಾಗ ಖಾಲಿ ಮಾಡುವಂತೆ ಸೂಚಿಸಲಾಯಿತು. ರಾಮ್ ರಹೀಮ್ ನನ್ನು ಪಂಚಕುಲದಿಂದ ಹೆಲಿಕಾಪ್ಟರ್ ಮೂಲಕ ರೋಹ್ಟಕ್ ಗೆ ಕರೆದೊಯ್ದು ನಿಗದಿತ ಜೈಲಿಗೆ ಕಳುಹಿಸಲಾಯಿತು.

Facebook Comments

Sri Raghav

Admin