ಅನಾಥ ಶವಗಳ ಅಂತ್ಯ ಸಂಸ್ಕಾರ ಮಾಡಿದ ಟ್ರಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Channapattana--01

ಚನ್ನಪಟ್ಟಣ, ಆ.27- ನಗರದ ಆಶ್ರಯ ಚಾರಿಟಬಲ್ ಟ್ರಸ್ಟ್ ಅನಾಥ ಶವವನ್ನು ಅಂತ್ಯಸಂಸ್ಕಾರ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಈವರೆಗೂ 34 ಅನಾಥ ಹಾಗೂ ಅಪರಿಚಿತ ಶವಗಳನ್ನು ಹಣ ಭರಿಸಿ ಅಂತ್ಯಸಂಸ್ಕಾರ ಮಾಡಿರುವ ಟ್ರಸ್ಟ್ ನ ಪದಾಧಿಕಾರಿಗಳು 35ನೇ ಅನಾಥ ಸಂಸ್ಕಾರವನ್ನು ಮಾಡುವುದರ ಮೂಲಕ ತಮ್ಮ ಮಾನವೀಯ ಸೇವೆಯನ್ನು ಮುಂದುವರೆಸಿದರು.

ಇದೇ 16 ರಂದು ಕೆಂಗಲ್ ಬಳಿಯ ಬಸ್ ನಿಲ್ದಾಣದಲ್ಲಿ ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅಪರಿಚಿತನೋರ್ವನನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ದಾಖಲು ಮಾಡಲಾಗಿತ್ತು. ನಂತರ ಆತನನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅಪರಿಚಿತ ಸಾವನ್ನಪ್ಪಿದ್ದ.

ಈ ವಿಚಾರ ತಿಳಿದ ಆಶ್ರಯ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷ ಜೀವರಕ್ಷಕ ಪ್ರಶಸ್ತಿ ಪುರಸ್ಕøತರಾದ ಪ್ರವೀಣ್‍ಕುಮಾರ್, ಉಪಾಧ್ಯಕ್ಷ ಅರುಣ್‍ಕುಮಾರ್, ಕಾರ್ಯದರ್ಶಿ ಅಪ್ಪಗೆರೆ ಕೆ.ರಾಜೇಶ್, ಜಂಟಿ ಕಾರ್ಯದರ್ಶಿ ರವಿಕುಮಾರ್ ಅವರುಗಳು ಪೊಲೀಸರ ನೆರವಿನೊಂದಿಗೆ ಅಪರಿಚಿತ ಶವವನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ತಂದರು. ಅಪರಿಚಿತನ ಮಾಹಿತಿ ಲಭ್ಯವಾಗದ ಕಾರಣ ಪೊಲೀಸರ ಸಮ್ಮುಖದಲ್ಲಿ ಮೃತನ ಅಂತ್ಯಸಂಸ್ಕಾರ ನಡೆಸಿದರು. ಆಶ್ರಯ ಚಾರಿಟಬಲ್ ಟ್ರಸ್ಟ್ ನ ಈ ಜನಮುಖಿ ಸೇವೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.

Facebook Comments

Sri Raghav

Admin