ಕಾನೂನು ಕೈಗೆತ್ತಿಕೊಳ್ಳುವವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi--014

ನವದೆಹಲಿ, ಆ.27-ಧರ್ಮದ ಹೆಸರಿನಲ್ಲಿ ಹಿಂಸಾಚಾರ ನಡೆಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಕಾನೂನು ಕೈಗೆತ್ತಿಕೊಳ್ಳುವವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ್ದಾರೆ. ಹರ್ಯಾಣದಲ್ಲಿ ವಿವಾದಾತ್ಮಕ ಸ್ವಘೋಷಿತ ದೇವಮಾನವ ಗುರ್ಮಿತ್ ರಾಮ್‍ರಹೀಂ ಸಿಂಗ್ ಬೆಂಬಲಿಗರು ನಡೆಸಿದ ವ್ಯಾಪಕ ಹಿಂಸಾಚಾರದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮೋದಿ, ಬಾಬಾ ಬೆಂಬಲಿಗರಿಗೆ ಉಗ್ರಕ್ರಮದ ಎಚ್ಚರಿಕೆ ನೀಡಿದರು.

ಪ್ರತಿತಿಂಗಳ ಕೊನೆ ಭಾನುವಾರ ದೇಶದ ಜನತೆಯನ್ನುದ್ದೇಶಿಸಿ ಬಾನುಲಿಯಲ್ಲಿ ಮಾತನಾಡುವ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿ, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನು ಕೈಗೆತ್ತಿಕೊಂಡರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಬಾಬಾ ಬೆಂಬಲಿಗರಿಗೆ ಸ್ಪಷ್ಟ ಸಂದೇಶ ರವಾನಿಸಿದರು.
ಬಾಬಾ ಬೆಂಬಲಿಗ ಗೂಂಡಾಗಳ ಹಿಂಸಾಚಾರ ಮತ್ತು ಗಲಭೆಯನ್ನು ಅವರು ಕಟು ಶಬ್ಧಗಳಲ್ಲಿ ಖಂಡಿಸಿದರು. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಶತಸಿದ್ಧ ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಿ ಹೇಳಿದರು.

ಭಾರತವು ಅಹಿಂಸೋ ಪರಮೋ ಧರ್ಮಃ ಎಂಬ ಉದಾತ್ತ ತತ್ವದಲ್ಲಿ ನಂಬಿಕೆ ಹೊಂದಿದೆ. ಗಾಂಧಿ ಹುಟ್ಟಿದ ದೇಶದಲ್ಲಿ ಹಿಂಸೆ ನಡೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಮೋದಿ ಹೇಳಿದರು. ದೇಶದ ವಿವಿಧ ರಾಜ್ಯಗಳಲ್ಲಿ ತಲೆದೋರಿರುವ ಪ್ರವಾಹ ಪರಿಸ್ಥಿತಿ ಬಗ್ಗೆ ಪ್ರಸ್ತಾಪಿಸಿದ ಮೋದಿಯವರು, ಗುಜರಾತ್‍ನಲ್ಲಿ ಪ್ರವಾಹದಿಂದ ಭಾರೀ ಪ್ರಮಾಣದ ಅನೈರ್ಮಲ್ಯ ಉಂಟಾಗಿದೆ. ಪ್ರವಾಹದಿಂದ ಕೊಳಕನ್ನು ಮುಸ್ಲಿಂ ಬಾಂಧವರು ಸ್ವಚ್ಛಗೊಳಿಸಿ ಸರ್ವಧರ್ಮ ಸಮನ್ವಯತೆ ಮೆರೆದಿದ್ದಾರೆ ಎಂದು ಪ್ರಧಾನಿ ಪ್ರಶಂಸಿಸಿದರು.

Facebook Comments

Sri Raghav

Admin