ಕಾರು ಚಾಲಕನ ಕತ್ತುಕೊಯ್ದು ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

Murder-Shira--01

ತುಮಕೂರು, ಆ.27- ಕಾರು ಚಾಲಕನೊಬ್ಬನ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಶಿರಾ ನಗರದ ಬಸ್ ನಿಲ್ದಾಣ ಮುಂಭಾಗದ ಮಿಲಿಟರಿ ಹೋಟೆಲ್ ಬಳಿ ನಡೆದಿದೆ. ಶಿರಾ ಟೌನ್ ಕಚೇರಿ ಮೊಹಲ್ಲಾದ ವಾಸಿ ಚಾಲಕ ಜಬಿವುಲ್ಲಾ(37)ಕೊಲೆಯಾದ ದುರ್ದೈವಿ. ರಾತ್ರಿ 11.30ರಲ್ಲಿ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಅರುಣ ಮಿಲಿಟರಿ ಹೋಟೆಲ್ ಬಳಿ ದುಷ್ಕರ್ಮಿಗಳು ಕುತ್ತಿಗೆಕೊಯ್ದು ಕೊಲೆ ಮಾಡಿದ್ದಾರೆ. ಈತನಿಗೆ ಪತ್ನಿ ಜಮೀನಾ ಹಾಗೂ ಮೂರು ವರ್ಷದ ಶಿಪಾನ್ ಎಂಬ ಮಗುವಿದ್ದು, ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾಗೋಪಿನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿಲಾ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಪ್ರಕರಣದ ತನಿಖೆಗೆ ನಗರದ ವೃತ್ತ ನಿರೀಕ್ಷಕ ಲಕ್ಷ್ಮಣ್, ಗ್ರಾಮಾಂತರ ವೃತ್ತನಿರೀಕ್ಷಕ ಸುದರ್ಶನ್ ನೇತೃತ್ವದಲ್ಲಿ ಎರಡು ತಂಡ ರಚಿಸಲಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ಜನನಿಬಿಡ ಸ್ಥಳದಲ್ಲಿ ಕೊಲೆಯಾಗಿ ಮಾಸುವ ಮುನ್ನವೇ ಶಿರಾ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿರುವುದರಿಂದ ಜನ ಬೆಚ್ಚಿಬಿದ್ದಿದ್ದಾರೆ.

Facebook Comments

Sri Raghav

Admin