ಚಿಕ್ಕೋಡಿ ಜೈಲಿನಿಂದ ಎಸ್ಕೇಪ್ ಆಗಿದ್ದ ಮೂವರು ಕೈದಿಗಳಲ್ಲಿ ಒಬ್ಬನ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Arrested-Man

ಚಿಕ್ಕೋಡಿ, ಆ.27- ಇಲ್ಲಿನ ಉಪ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದ ಮೂವರು ವಿಚಾರಣಾಧೀನ ಕೈದಿಗಳಲ್ಲಿ ಒಬ್ಬನನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ನಿತಿನ್ ಜಾಧವ್ ಬಂಧಿತ ಖೈದಿ. ಬೆಳಗಾವಿ ಜಿಲ್ಲೆಯ ಸವದತ್ತಿ ಎಲ್ಲಮ್ಮನ ಗುಡ್ಡದಲ್ಲಿ ಈ ಖೈದಿ ಅಡಗಿದ್ದಾನೆ ಎಂಬ ಮಾಹಿತಿ ಪಡೆದ ಚಿಕ್ಕೋಡಿ ಪೊಲೀಸರು ದಾಳಿ ನಡೆಸಿ ಅವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ 4 ತಿಂಗಳ ಹಿಂದಷ್ಟೇ ಚಿಕ್ಕೋಡಿ ಉಪ ಕಾರಾಗೃಹದ ಹಿಂಭಾಗದ ಗೋಡೆಯ ಕಲ್ಲುಗಳನ್ನು ಕಿತ್ತು ಹಾಕಿ ಮಹಾರಾಷ್ಟ್ರ ಮೂಲದ ಶರದ್ ಪವಾರ್, ಅಶೋಕ್ ಬೋಸ್ಲೆ ಮತ್ತು ನಿತಿನ್ ಜಾದವ್ ಪರಾರಿಯಾಗಿದ್ದ ಈ ಖೈದಿಗಳು ದರೋಡೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿದ್ದರು. ಇವರ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿತ್ತು. ತಲೆ ತಪ್ಪಿಸಿಕೊಂಡಿರುವ ಶರದ್ ಪವಾರ್ ಮತ್ತು ಅಶೋಕ್ ಬೋಸ್ಲೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Facebook Comments

Sri Raghav

Admin