ಬೆಮೆಲ್ ಕಾರ್ಖಾನೆ ಖಾಸಗೀಕರಣ : ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅರುಣ್ ಜೇಟ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Arun--01

ಕೆಜಿಎಫ್, ಆ.27- ಬೆಮೆಲ್ ಕಾರ್ಖಾನೆಯನ್ನು ಖಾಸಗೀಕರಣಗೊಳಿಸದಂತೆ ಕಾರ್ಮಿಕರು ಹಾಗೂ ಸಂಘ-ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳು ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸಚಿವ ಅರುಣ್‍ಜೇಟ್ಲಿ ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದವರಿಗೆ ನಿರಾಶೆ ಉಂಟಾಯಿತು.
ಭಾರತ ದೇಶದಲ್ಲೇ ಪ್ರಥಮ ಬಾರಿಗೆ ಕೆಜಿಎಫ್ ಬಿಇಎಂಎಲ್ ಕಾರ್ಖಾನೆಯಲ್ಲಿ ತಯಾರಿಸಲಾದ ಅತಿ ಹೆಚ್ಚು ಸಾಮಥ್ರ್ಯ ಹೊಂದಿರುವ 180 ಟನ್ ಹೈಡ್ರಾಲಿಕ್ ಎಕ್ಸಾವೇಟರ್ ಮತ್ತು 850 ಹೆಚ್‍ಪಿ ಬುಲ್ಡೋಜರ್ ಉದ್ಘಾಟನೆಗೆ ಆಗಮಿಸಿದ್ದ ಅರುಣ್‍ಜೇಟ್ಲಿ ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಎಲ್ಲರಿಗೂ ನಿರಾಶೆ ಉಂಟು ಮಾಡಿತ್ತು.

ಸಂಸದ ಕೆ.ಹೆಚ್.ಮುನಿಯಪ್ಪ ಮಾತನಾಡಿ, 2001ರಲ್ಲಿ ಅಂದಿನ ಎನ್‍ಡಿಎ ಸರ್ಕಾರ ನಷ್ಟದ ನೆಪವೊಡ್ಡಿ ಬಿಜಿಎಂಎಲ್ ಚಿನ್ನದ ಗಣಿಯನ್ನು ಮುಚ್ಚಿತು. ಆದರೆ ಯುಪಿಎ ಸರ್ಕಾರ ಅವಧಿಯಲ್ಲಿ ಚಿನ್ನದ ಗಣಿಯನ್ನು ಮತ್ತೆ ಪುರಾರಂಭ ಮಾಡಬೇಕು ಗ್ಲೋಬಲ್ ಟೆಂಡರ್ ಕರೆಯಬೇಕು ಎಂದು ಕ್ಯಾಬಿನೆಟ್‍ನಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.  ಕೇಂದ್ರದ ಬಿಜೆಪಿ ಸರ್ಕಾರ ಕಳೆದ 52 ವರ್ಷಗಳಿಂದ ಲಾಭದಾಯಕವಾಗಿ ಮುನ್ನಡೆಯುತ್ತಿರುವ ಬೆಮೆಲ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಮೂಲಕ ಕಾರ್ಮಿಕರನ್ನು ಸಂಕಷ್ಟಕ್ಕೆ ಸಿಲುಕಿಸಲು ಮುಂದಾಗಿದೆ. ಯಾವುದೇ ಕಾರಣಕ್ಕೂ ಬೆಮೆಲ್ ಖಾಸಗೀಕರಣ ಮಾಡಲು ಬಿಡುವುದಿಲ್ಲ ಎಂದರು.

ಶಾಸಕಿ ವೈ.ರಾಮಕ್ಕ ಸಲ್ಲಿಸಿದ ಮನವಿ ಪತ್ರದಲ್ಲಿ ಬಿಜಿಎಂಎಲ್ ಪುಶ್ಚೇತನಗೊಳಿಸಬೇಕು, ಬೆಮೆಲ್ ಸಂಸ್ಥೆಯನ್ನು ಖಾಸಗೀಕರಣಗೊಳಿಸಬಾರದು, ಚಿನ್ನದ ಗಣಿ ಕಾರ್ಮಿಕ ಕುಟುಂಬಗಳ ಸದಸ್ಯರಿಗೆ ರೈಲ್‍ಕೋಚ್ ಮತ್ತು ಬೆಮೆಲ್ ಘಟಕದಲ್ಲಿ ಉದ್ಯೋಗವಕಾಶ ಕಲ್ಪಿಸಬೇಕು, ತಾತ್ಕಾಲಿಕ ಮತ್ತು ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು, ಬೆಮೆಲ್ ಭೂ ಪ್ರದೇಶದಲ್ಲಿ ಮೆಟ್ರೋ ಕೋಚ್ ಘಟಕ ಸ್ಥಾಪಿಸಿ ಯುವಕರಿಗೆ ಉದ್ಯೋಗ ನೀಡಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ತಿಳಿಸಲಾಗಿದೆ ಎಂದರು.

ದೇಶದಲ್ಲಿ ಈಗಾಗಲೇ ಬೆಮೆಲ್ ಸೇರಿದಂತೆ ಇತರೆ ಕಾರ್ಖಾನೆಗಳಲ್ಲಿ 100 ಟನ್ ಸಾಮಥ್ರ್ಯದ ಬುಲ್ಡೋಜರ್ ಮತ್ತು ಹೈಡ್ರಾಲಿಕ್‍ಗಳು ಚಾಲ್ತಿಯಲ್ಲಿವೆ. ಆದರೆ ದೇಶದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚಿನ ಸಾಮಥ್ರ್ಯದ ಹೈಡ್ರಾಲಿಕ್ ಎಕ್ಸಾವೇಟರ್ ಮತ್ತು ಬುಲ್ಡೋಜರ್‍ನ್ನು ತಯಾರಿಸಿ ನಲ್‍ಕೋ ಕಂಪನಿಯವರಿಗೆ ಮಾರಾಟ ಮಾಡುವುದಾಗಿ ಬೆಮೆಲ್ ಆಡಳಿತ ಮಂಡಳಿ ತಿಳಿಸಿದೆ.

ಇದೇ ವೇಳೆ ಬೆಮೆಲ್‍ನ ರಕ್ಷಣಾ ಯಂತ್ರಗಳ ಘಟಕ್ಕೆ ಭೇಟಿ ನೀಡಿ ಪ್ರತಿಯೊಂದು ಯಂತ್ರೋಪಕರಣಗಳು, ಡೋಜರ್‍ಗಳು ಮತ್ತಿತರೆ ಯಂತ್ರಗಳನ್ನು ಪರಿಶೀಲಿಸಿದ ರಕ್ಷಣಾ ಸಚಿವ ಅರುಣ್‍ಜೆಟ್ಲೆ ಬೆಮೆಲ್ ಸಿಎಂಡಿ ದೀಪಕ್‍ಕುನಾರ್ ಹೊಟಾ ಅವರಿಂದ ಮಾಹಿತಿ ಪಡೆದರು. ನಂತರ ಬೆಮೆಲ್ ಆಡಳಿತ ಮಂಡಳಿ ಏರ್ಪಡಿಸಿದ್ದ ತುನುಕು ಪ್ರದರ್ಶನವನ್ನು ವೀಕ್ಷಿಸಿದರು. ಬೆಮೆಲ್ ಕಾರ್ಮಿಕ ಸಂಘದ ಅಧ್ಯಕ್ಷ ಆಂಜನೇಯರೆಡ್ಡಿ, ಬೆಮೆಲ್ ಎಸ್‍ಸಿ, ಎಸ್‍ಟಿ ಘಟಕದ ಅಧ್ಯಕ್ಷ ರಾಜಶೇಖರ್, ನಗರಸಭೆ ಅಧ್ಯಕ್ಷ ರಮೇಶ್‍ಕುಮಾರ್, ಸಿಐಟಿಯು, ಸಿಪಿಎಂ ಮುಖಂಡರಾದ ಅರ್ಜುನನ್, ತಂಗರಾಜ್, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದೀಪಕ್‍ಕುನಾರ್ ಹೊಟ, ಒಎಫ್‍ಡಿನ ಅಧ್ಯಕ್ಷ ಎಸ್.ಸಿ.ಬಾಜ್‍ಬಾಯ್, ನೆಲ್‍ಕೋನ ಅಧ್ಯಕ್ಷ ಚಂದ್ ಮುಂತಾದವರು ಹಾಜರಿದ್ದರು.

Facebook Comments

Sri Raghav

Admin