ಮೈಸೂರು ದಸರಾದಲ್ಲಿ 42 ಸ್ತಬ್ಧ ಚಿತ್ರ, 201 ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

dasara--mysore

ಮೈಸೂರು,ಆ.27-ಜಗತ್ ವಿಖ್ಯಾತ ದಸರಾ ಮಹೋತ್ಸವದಲ್ಲಿ 201 ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಉಪ ಸಮಿತಿ ಹಾಗೂ ಮರೆವಣಿಗೆ ಉಪ ಸಮಿತಿ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಂಬೂ ಸವಾರಿ ಮೆರವಣಿಗೆಯಲ್ಲಿ 42 ಸ್ತಬ್ಧ ಚಿತ್ರಗಳು ಪಾಲ್ಗೊಳ್ಳಲಿವೆ ಎಂದು ಹೇಳಿದರು.
ಸೆ.21ರಿಂದ ಅರಮನೆ ಆವರಣ , ಕಲಾಮಂದಿರ, ಜಗನ್ ಮೋಹನ್ ಆರಮನೆ, ಗಾನಭಾರತಿ ಸಭಾಂಗಣ, ಚಿಕ್ಕಗಡಿಯಾರ ಹಾಗೂ ಕಿರು ರಂಗಮಂದಿರ ಸೇರಿದಂತೆ ಏಳು ಸ್ಥಳಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಪ್ರತಿ ವೇದಿಕೆಯಲ್ಲಿ ಮೂರು ಕಾರ್ಯಕ್ರಮಗಳಂತೆ ಒಂದು ದಿನಕ್ಕೆ ಒಟ್ಟು 21 ಕಾರ್ಯಕ್ರಮ ನಡೆಯಲಿವೆ. ಪ್ರತಿ ವೇದಿಕೆಯಲ್ಲೂ ದೇಶ-ವಿದೇಶದ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಈ ಬಾರಿಯ ದಸರಾ ಮಹೋತ್ಸವದಲ್ಲಿ ಗಣರಾಜ್ಯೋತ್ಸವದಂದು ನವದೆಹಲಿಯಲ್ಲಿ ನಡೆಯುವ ಪಥಸಂಚಲನ ಮಾದರಿಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಮೆರವಣಿಗೆಯಲ್ಲಿ 2 ಸ್ತಬ್ಧ ಚಿತ್ರಗಳ ನಡುವೆ ಒಂದೊಂದು ಕಲಾ ತಂಡಗಳು ತೆರಳಲಿವೆ. ತಂಡಗಳು ಸಮವಸ್ತ್ರ ಧರಿಸುವುದರಿಂದ ಮೆರವಣಿಗೆ ಇನ್ನಷ್ಟು ರಂಗು ತರಲಿದೆ ಎಂದು ತಿಳಿಸಿದರು.

Facebook Comments

Sri Raghav

Admin